ಬೈಂದೂರು: ಕಳೆದ ಮೂರು ವರ್ಷಗಳ ಹಿಂದೆ ಪ್ರಾರಂಭಗೊಂಡ ಸಹಕಾರ ಸಂಘ ಇಲ್ಲಿಯ ತನಕ 1500 ‘ಅ’ ತರಗತಿ ಸದಸ್ಯರನ್ನು ಮತ್ತು 49.90 ಲಕ್ಷ ರೂ. ಪಾಲು ಬಂಡವಾಳ ಹೊಂದಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ 29.58 ಕೋಟಿ ರೂ. ವ್ಯವಹಾರ ನಡೆಸಿದ್ದು, ಸದಸ್ಯರಿಗೆ 6.67 ಕೋಟಿ ರೂ. ವಿವಿಧ ಸಾಲ ನೀಡಿದೆ. 11.8 ಲಕ್ಷ ರೂ. ಲಾಭ ಗಳಿಸಿ, ಸದಸ್ಯರಿಗೆ ಶೇ.7 ಡಿವಿಡೆಂಡ್ ನೀಡುತ್ತಿದ್ದೇವೆ ಎಂದು ಅಧ್ಯಕ್ಷ ಜೋಗಿಜಡ್ಡು ಮಹಾಲಿಂಗ ನಾಯ್ಕ ಹೇಳಿದರು.
ಜಡ್ಕಲ್ ಸಿದ್ದೇಶ್ವರ ಮರಾಟಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ವಾರ್ಷಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉದಯ ನಾಯ್ಕ ಕನ್ಕಿಮಡಿ ಆರ್ಥಿಕ ವರದಿ ಮಂಡಿಸಿದರು. ಸಂಘದ ಉಪಾಧ್ಯಕ್ಷ ಚಂದ್ರಶೇಖರ ನಾಯ್ಕ ಹರ್ಕೋಡು, ನಿರ್ದೇಶಕರಾದ ಸುರೇಶ ನಾಯ್ಕ ಬೆಳ್ಳಾಲ, ದೇವಪ್ಪ ನಾಯ್ಕ ಮುತ್ತಾಬೇರು, ಮಂಜುನಾಥ ನಾಯ್ಕ ದಳಿ, ಮಂಜುನಾಥ ನಾಯ್ಕ ಹಳ್ಳಿಹೊಳೆ, ರಾಮ ನಾಯ್ಕ ಏಳಜಿತ, ಶಂಕರ ನಾಯ್ಕ ಗೋಳಿಹೊಳೆ, ರವೀಂದ್ರ ನಾಯ್ಕ ಮಾರಣಕಟ್ಟೆ, ವನಿತಾ ವಿ. ಮತ್ತು ಮಲ್ಲಿಕಾ ಗೊರ್ಕಲ್ ಇದ್ದರು. ನಿರ್ದೇಶಕ ಸದಾಶಿವ ನಾಯ್ಕ ನಂದಿಗದ್ದೆ ಸ್ವಾಗತಿಸಿದರು. ಗೌರವ ಸಲಹೆಗಾರ ಡಾ.ರಘು ನಾಯ್ಕ ಕಾರ್ಯಕ್ರಮ ನಿರೂಪಿಸಿದರು.
ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ವ್ಯವಸ್ಥಾಪನಾ ಸಮಿತಿಗೆ ಆಯ್ಕೆಯಾದ ಸಂಘದ ಅಧ್ಯಕ್ಷ ಜೋಗಿಜಡ್ಡು ಮಹಾಲಿಂಗ ನಾಯ್ಕ ಅವರನ್ನು ಸನ್ಮಾನಿಸಲಾಯಿತು. ಸಿಬ್ಬಂದಿ ಜಯೇಶ್ ಎಚ್., ನಾಗರತ್ನ, ಪಿಗ್ಮಿ ಸಂಗ್ರಾಹಕ ಅಶೋಕ್, ಬಿಜು, ಶೇಖರ್ ಅವರನ್ನು ಗೌರವಿಸಲಾಯಿತು.