ಬೈಂದೂರು: ಬಾಡ ಮೂಲದ ಅನಿತಾ ಪುರಾಣಿಕ್ ಅವರಿಗೆ ಧಾರವಾಡದ ಕರ್ನಾಟಕ ವಿವಿ ಪಿಎಚ್‌ಡಿ ಪದವಿ ನೀಡಿದೆ. ಅವರು ಸಂಶೋಧನೆ ನಡೆಸಿ ಮಂಡಿಸಿದ ಫಾರ್ಮಾಕೋಗ್ನಸಿ ಆ್ಯಂಡ್ ಎನ್ಹಾನ್ಸ್‌ಮೆಂಟ್ ಆಫ್ ಫೈಟೋಡ್ರಗ್ ಎಫಿಕಸಿ ಬೈ ಮೆಟಲಿಕ್ ನ್ಯಾನೋ ಪಾರ್ಟಿಕಲ್ಸ್ ಸಿಂಥಸೈಸ್ಡ್ ಯೂಸಿಂಗ್ ಸೆಲೆಕ್ಟಡ್ ಮೆಡಿಸಿನಲ್ ಪ್ಲಾಂಟ್ಸ್ ಎಂಬ ಮಹಾಪ್ರಬಂಧಕ್ಕೆ ಈ ಪದವಿ ಲಭಿಸಿದೆ. ಧಾರವಾಡದ ಜೆಎಸ್‌ಎಸ್ ಬನಶಂಕರಿ ಕಲಾ, ವಾಣಿಜ್ಯ ಮತ್ತು ಶಾಂತಿಕುಮಾರ ಗುಬ್ಬಿ ವಿಜ್ಞಾನ ಮಹಾ ವಿದ್ಯಾಲಯದ ಜೈವಿಕ ತಂತ್ರಜ್ಞಾನ ವಿಭಾಗದ ಉಪನ್ಯಾಸಕಿಯಾಗಿರುವ ಅವರು ಕವಿವಿ ಸಸ್ಯಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ಹಾಗೂ ಪ್ರಸ್ತುತ ಹಾಸನ ವಿಶ್ವವಿದ್ಯಾಲಯದ ಕುಲಪತಿ ಡಾ.ಟಿ.ಸಿ.ತಾರಾನಾಥ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ್ದರು. ಅನಿತಾ ಪುರಾಣಿಕ್ ಬೈಂದೂರು ರತ್ತುಬಾಯಿ ಜನತಾ ಪ್ರೌಢಶಾಲೆ ಮುಖ್ಯಶಿಕ್ಷಕ ದಿ.ಬಿ.ಸದಾಶಿವ ಭಟ್-ಬಿ.ಜಯದೇವಿ ದಂಪತಿ ಪುತ್ರಿ ಹಾಗೂ ಕುಂದಾಪುರ ಕಾಳಾವರದ ಡಾ.ನಾಗರಾಜ ಶ್ರೀನಿವಾಸ ಪುರಾಣಿಕ್ ಅವರ ಪತ್ನಿ.