ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಸಾಂಬಾರತೋಟ ಶಾಲೆಗೆ ಸಂಬಂಧಪಟ್ಟಂತೆ ತಡೆಗೋಡೆ ಸಹಿತ ಹಲವು ಕಾಮಗಾರಿಗಳು ನಡೆಯಬೇಕಿದ್ದು, ಆರಂಭಿಕ ಹಂತದಲ್ಲಿ ಅಂಗನವಾಡಿ ಕೇಂದ್ರದ ಕಟ್ಟಡ ನಿರ್ಮಾಣಕ್ಕೆ ಶಿಲಾನ್ಯಾಸ ನಡೆಸಲಾಗಿದೆ ಎಂದು ಕುರ್ನಾಡು ಪದವಿಪೂರ್ವ ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಪ್ರಶಾಂತ್ ಕಾಜವ ಹೇಳಿದರು.
ಪಜೀರ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾಂಬಾರತೋಟ ಸಂಪತ್ ಮೈದಾನ ಅಂಗನವಾಡಿ ಕೇಂದ್ರದ ಕಟ್ಟಡ ಕಾಮಗಾರಿಗೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.
ಪಜೀರ್ ಗ್ರಾಪಂ ಅಧ್ಯಕ್ಷ ಕೆ.ಮಹಮ್ಮದ್ ರಫೀಕ್, ಉಪಾಧ್ಯಕ್ಷೆ ಫ್ಲೋರಿನ್ ಡಿಸೋಜ, ಮಾಜಿ ಅಧ್ಯಕ್ಷರಾದ ಭರತ್ ರಾಜ್ ಶೆಟ್ಟಿ ಪಜೀರುಗುತ್ತು, ಸೀತಾರಾಮ ಶೆಟ್ಟಿ, ಇಮ್ತಿಯಾಝ್ ಪಜೀರ್, ನಝೀರ್ ಮೊಯಿದ್ದೀನ್, ಸದಸ್ಯರಾದ ಶಾಕೀರ್, ಸಿರಾಜ್, ಮೀನಾಕ್ಷಿ, ಸುಮಯ್ಯ, ಪಿಡಿಒ ಶ್ರೀಕಾಂತ್, ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಬಂಟ್ವಾಳ ತಾಪಂ ಮಾಜಿ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಮಾಜಿ ಸದಸ್ಯ ಹೈದರ್ ಕೈರಂಗಳ, ಬಾಳೆಪುಣಿ ಗ್ರಾಪಂ ಅಧ್ಯಕ್ಷೆ ಸುಕನ್ಯಾ ರೈ, ಅರುಣ್ ಡಿಸೋಜ ಮುಡಿಪು, ಗ್ಯಾರಂಟಿ ಸಮಿತಿಯ ಸಮೀರ್ ಪಜೀರ್, ಅಂಗನವಾಡಿ ಮೇಲ್ವಿಚಾರಕಿ ಮುಬೀನಾ ಮತ್ತಿತರರು ಉಪಸ್ಥಿತರಿದ್ದರು. ಬಾದುಶಾ ಸಾಂಬಾರತೋಟ ಸ್ವಾಗತಿಸಿದರು. ರೇಶ್ಮಾ ಡಿಸೋಜ ವಂದಿಸಿದರು.