ಜಿಲ್ಲೆ

ಬ್ಯಾಂಕ್​ ಲೂಟಿಗೆ ಯತ್ನಿಸಿ ಆಂದ್ರ ಪೊಲೀಸರಿಗೆ ಸೆರೆ ಸಿಕ್ಕ ಕೋಲಾರದ ಕಳ್ಳರು!

ಕೋಲಾರ: ಬ್ಯಾಂಕ್​ ಲೂಟಿಗೆ ಯತ್ನಿಸಿದ ಕೋಲಾರ ಮೂಲದ ಆರು ಮಂದಿ ಕಳ್ಳರನ್ನು ಚಿತ್ತೂರು ಪೊಲೀಸರು ಬಂಧಿಸಿದ್ದಾರೆ.

ಇತ್ತೀಚೆಗೆ ಆಂದ್ರಪ್ರದೇಶದ ಚಿತ್ತೂರುನಲ್ಲಿ ಬ್ಯಾಂಕ್ ಲೂಟಿಗೆ ಯತ್ನಿಸಿದ ರಾಜ್ಯದ 6 ಮಂದಿ ಸೇರಿ ಒಟ್ಟು 8 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕೋಲಾರ ಜಿಲ್ಲೆಯ ಕೆಜಿಎಫ್ ಮತ್ತು ಮಾಲೂರು ತಾಲೂಕಿನ ಆರೋಪಿಗಳೆಂದು ತಿಳಿದು ಬಂದಿದ್ದು, ಪವನ್ (20),ಅಂಬರೀಷ್(23), ಶ್ರೇಯಸ್(20), ಸುಮನ್(24),ಮಂಜುನಾಥ್ (26), ಶಿವ(29), ಚರಣ್ ಕುಮಾರ್(24), ಕುಮಾರ್(22) ಬಂಧಿತರು.

ಚಿತ್ತೂರು ಜಿಲ್ಲೆಯ ರಾಮಕುಪ್ಪಂನ ಸಪ್ತಗಿರಿ ಬ್ಯಾಂಕ್ ಲೂಟಿಗೆ ಯತ್ನಿಸಿದ್ದು,ಗ್ಯಾಸ್ ಕಟ್ಟರ್ ಬಳಸಿ ಬ್ಯಾಂಕ್​​ ನ ಶೆಟರ್ ಕತ್ತರಿಸಿ ಕಳ್ಳರು ಪ್ರವೇಶಿಸಿದ ಕೂಡಲೇ ಬ್ಯಾಂಕ್‌ ಸೈರನ್ ಶಬ್ದದಿಂದಾಗಿ ಅಲ್ಲಿಂದ ಪರಾರಿಯಾಗಿದ್ದರು.

ಕೃತ್ಯಕ್ಕೆ ಬೆಂಗಳೂರಿನ ಮಾರತಹಳ್ಳಿಯಿಂದ ಗ್ಯಾಸ್ ಕಟ್ಟರ್ ಖರೀದಿಸಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. (ದಿಗ್ವಿಜಯ ನ್ಯೂಸ್​)