ಬೆಳ್ತಂಗಡಿ: ನಾರಾವಿ ಗ್ರಾಮದಲ್ಲಿರುವ ಭಗವಾನ್ ಶ್ರೀ ಧರ್ಮನಾಥ ಸ್ವಾಮಿ ಬಸದಿಯಲ್ಲಿ 13ನೇ ವರ್ಷದ ಅನಂತನೋಂಪಿ ಆರಾಧನಾ ವಿಧಾನದ ಪ್ರಥಮ ದಿನದ ಪೂಜೆ ನಡೆಯಿತು.
12 ಶ್ರಾವಕರು, 8 ಶ್ರಾವಕಿಯರು ಸೇರಿದಂತೆ ಒಟ್ಟು 20 ಮಂದಿ ನೋಂಪಿಯ ವ್ರತಧಾರಿಗಳಾಗಿ ಶ್ರದ್ಧಾಭಕ್ತಿಯಿಂದ ಭಾಗವಹಿಸಿದರು. ಅಳದಂಗಡಿಯ ಪದ್ಮಪ್ರಭ ಇಂದ್ರ, ನಾರಾವಿ ಹರ್ಷೇಂದ್ರ ಇಂದ್ರ ಸಹಕಾರದೊಂದಿಗೆ ನೋಂಪಿ ಆರಾಧನಾ ವಿಧಾನ ನಡೆಯಿತು. ಮೂರು ದಿನಗಳಲ್ಲಿ ಅನಂತ ನೋಂಪಿ ನಡೆದು ಇಂದು ಸಮಾಪನಗೊಳ್ಳಲಿದೆ. ಇಂದು 12ಕ್ಕೆ ಕಾರ್ಕಳ ಜೈನಮಠದ ಪೂಜ್ಯ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ ಮಂಗಲಪ್ರವಚನ ನೀಡಲಿದ್ದಾರೆ.