ಜಿಲ್ಲೆ

ವಾಣಿಜ್ಯ ಮತ್ತು ಕಲಾ ವಿದ್ಯಾರ್ಥಿಗಳಿಗೆ ವಿಪುಲ ಅವಕಾಶ

ಇಂದಿರಾ ಎನ್ ಕೆ

ಕೋಟ: ವಿಜ್ಞಾನ ವಿಷಯ ಓದಿದರೆ ವಾತ್ರ ಉದ್ಯೋಗವನ್ನು ಪಡೆದು ಜೀವನ ನಿರೂಪಿಸಿಕೊಳ್ಳಲು ಸಾಧ್ಯ ಎಂದು ತಿಳಿಯದೆ ವಿದ್ಯಾರ್ಥಿಗಳು ವಾಣಿಜ್ಯ ಮತ್ತು ಕಲಾ ವಿಷಯಗಳನ್ನು ಆಯ್ಕೆ ವಾಡಿ ಕೊಂಡು ಪ್ರಯತ್ನದಿಂದ ಅಧ್ಯಯನಶೀಲರಾದರೆ ಬಹಳಷ್ಟು ಅವಕಾಶಗಳು ಇದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಬೆಂಗಳೂರು ಇದರ ನಿವೃತ್ತ ಸಹ ನಿರ್ದೇಶಕ ಸುರೇಶ ತುಂಗ ಹೇಳಿದರು.

ಕೋಟ ವಿವೇಕ ಪದವಿ ಪೂರ್ವ ಕಾಲೇಜಿನಲ್ಲಿ ವಾಣಿಜ್ಯ ಮತ್ತು ಕಲಾ ವಿಭಾಗದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಿ ಮಾತನಾಡಿದರು.

ಕೋಟ ವಿದ್ಯಾಸಂದ ಅಧ್ಯಕ್ಷ ಸಿಎ ಪ್ರಭಾಕರ ಮಯ್ಯ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಎಂ.ರಾಮದೇವ ಐತಾಳ್ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ 5ನೇ ಸ್ಥಾನ ಪಡೆದು ವಿಶೇಷ ಸಾಧನೆಗೈದ ಬಾಲಕೃಷ್ಣ ಭಟ್ ಅವರನ್ನು ಸನ್ಮಾನಿಸಲಾಯಿತು.

ಜತೆ ಕಾರ್ಯದರ್ಶಿ ಮಂಜುನಾಥ ಉಪಾಧ್ಯ, ಹಿಂದಿನ ವಿದ್ಯಾರ್ಥಿ ಸಂದ ಕಾರ್ಯದರ್ಶಿ ಸುಧಾಕರ್, ಮುಖ್ಯಶಿಕ್ಷಕಿ ವೆಂಕಟೇಶ ಉಡುಪ, ಪ್ರೀತಿರೇಖಾ, ಸಹ ಶಿಕ್ಷಕ ಪ್ರೇವಾನಂದ ಉಪಸ್ಥಿತರಿದ್ದರು.

ಪ್ರಾಂಶುಪಾಲ ಜಗದೀಶ ನಾವಡ ಸ್ವಾಗತಿಸಿದರು. ಉಪನ್ಯಾಸಕ ಸದಾಶಿವ ಹೊಳ್ಳ ವಂದಿಸಿದರು. ಶೋಭಾ, ಜಯಶ್ರೀ ನಿರೂಪಿಸಿದರು.