ಜಿಲ್ಲೆ

ಆಂಬ್ಯುಲೆನ್ಸ್​​ಗೆ ಅಡ್ಡಿಯಾದ ಹುರುಳಿ ಸೊಪ್ಪು, ನಡು ರಸ್ತೆಯಲ್ಲೇ ಗರ್ಭಿಣಿ ಪರದಾಟ!

ಮೈಸೂರು: ರಸ್ತೆಯಲ್ಲೇ ಹುರುಳಿ ಒಕ್ಕಣೆ ಮಾಡುತ್ತಿದ್ದ ಪರಿಣಾಮ, ಗರ್ಭಿಣಿಯನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದ ಆಂಬ್ಯುಲೆನ್ಸ್ ಅರ್ಧದಲ್ಲೇ ಕೆಟ್ಟು ನಿಂತು ಪರದಾಟ ನಡೆಸಿದ ಘಟನೆ ನಂಜನಗೂಡು ತಾಲೂಕಿನ ಕೂಡ್ಲಾಪುರ ಬಳಿ ನಡೆದಿದೆ.

ನಂಜನಗೂಡು ತಾಲೂಕು ತರದಲೆ ಗ್ರಾಮದ ಗರ್ಭಿಣಿಯನ್ನು ಆಂಬ್ಯುಲೆನ್ಸ್​​ನಲ್ಲಿ ಆಸ್ಪತ್ರೆಗೆ ಕರೆದೊಯ್ಯುಲಾಗುತ್ತಿತ್ತು. ರೈತರು ರಸ್ತೆಯಲ್ಲಿ ಒಕ್ಕಣೆ ಮಾಡುತ್ತಿದ್ದ ಪರಿಣಾಮ ಹುರಳಿ ಸೊಪ್ಪು ಆಂಬುಲೆನ್ಸ್ ಟೈರಿಗೆ ಸುತ್ತಿಕೊಂಡು ವಾಹನ ಮುಂದಕ್ಕೆ ಹೋಗಲಾರದೆ ಪರದಾಟ ನಡೆಸಿದ್ದಾರೆ. ನಂತರ ಸ್ಥಳೀಯರ ನೆರವಿನಿಂದ ಹುರಳಿ ಸೊಪ್ಪು ತೆರವು ಮಾಡಿದ್ದು, ಅರ್ಧ ಗಂಟೆ ಕಾರ್ಯಾಚರಣೆ ನಂತರ ಆಂಬುಲೆನ್ಸ್ ಮುಂದೆ ಸಾಗಿದೆ.