ಜಿಲ್ಲೆ

ಜಗತ್ತಿಗೇ ಶ್ರೇಷ್ಠ ಸಂವಿಧಾನ ಕೊಟ್ಟ ಅಂಬೇಡ್ಕರ್​: ಸಚಿವ ಎಚ್​.ಸಿ.ಮಹದೇವಪ್ಪ ಬಣ್ಣನೆ

ಬೆಂಗಳೂರು: ಡಾ.ಬಿ.ಆರ್​.ಅಂಬೇಡ್ಕರ್​ ಅವರು ಭಾರತಕ್ಕೆ ಮಾತ್ರವಲ್ಲ, ಇಡೀ ಜಗತ್ತಿಗೇ ಶ್ರೇಷ್ಠ ಸಂವಿಧಾನವನ್ನು ಕೊಟ್ಟಿದ್ದಾರೆ ಎಂದು ಸಚಿವ ಎಚ್​.ಸಿ. ಮಹದೇವಪ್ಪ ಹೇಳಿದ್ದಾರೆ.

ಕರ್ನಾಟಕ ಪಶುವೈದ್ಯಕಿಯ, ಪಶು ಹಾಗೂ ಮೀನುಗಾರಿಕೆ ವಿಾನಗಳ ವಿವಿಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕೋಶ ಆಯೋಜಿಸಿಸಲಾದ ಅಂಬೇಡ್ಕರ್​ ಜಯಂತಿ ಮತ್ತು ತಾಂತ್ರಿಕ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಸಂವಿಧಾನವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ 40 ಕೋಟಿ ಜನರ ಹಕ್ಕು ಕಾಪಾಡುತ್ತಿದೆ. ಶೋಷಣೆಯ ವಿರುದ್ಧ ನಿರಂತರ ಹೋರಾಟ ಮಾಡಿದವರು ಎಂದರು.

ವಿವಿ ಕುಲಪತಿ ಪ್ರೊ. ಕೆ.ಸಿ. ವೀರಣ್ಣ ಮಾತನಾಡಿ, ಅಂಬೇಡ್ಕರ್​ ಅವರಂತೆ ವಿದ್ಯಾರ್ಥಿಗಳು ಅಧ್ಯಯನ ಮಾಡಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಎಸ್ಸಿ-ಎಸ್ಟಿ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ದೊರೆಯಲು ಅಂಬೇಡ್ಕರ್​ ಕಾರಣ ಎಂದು ವಿವಿ ಕುಲಸಚಿವ ಪ್ರೊ.ಪಿ.ಟಿ. ರಮೇಶ್​ ಹೇಳಿದರು. ಇದೇ ವೇಳೆ ಹೆಬ್ಬಾಳ ಪಶುವೈದ್ಯಕಿಯ ಕಾಲೇಜಿನಲ್ಲಿ ಅಂಬೇಡ್ಕರ್​ ಭವನ ನಿರ್ಮಾಣ, ವಿದ್ಯಾರ್ಥಿಗಳಿಗೆ ಹಾಸ್ಟೆಲ್​ ಸ್ಥಾಪನೆ, ಅನುದಾನ ಮಂಜೂರು, ಬೋಧಕ, ಬೋಧಕೇತರ ಹುದ್ದೆಗಳ ಭರ್ತಿ ಸೇರಿ ವಿವಿಧ ಬೇಡಿಕೆಗಳನ್ನು ಸಚಿವರಿಗೆ ಮನವಿ ಮಾಡಲಾಯಿತು.

ವಿದ್ಯಾರ್ಥಿಗಳಿಗೆ ಸಂವಿಧಾನ ಪೀಠಿಕೆ ಬೋಧಿಸಲಾಯಿತು. ಉಚಿತ ಲ್ಯಾಪ್​ಟಾಪ್​, ಪ್ರಮಾಣಪತ್ರ ವಿತರಿಸಲಾಯಿತು. ವಿವಿ ಡೀನ್​ ಡಾ.ಎನ್​.ಕೆ. ಶಿವಕುಮಾರ್​ಗೌಡ, ವ್ಯವಸ್ಥಾಪಕ ಮಂಡಳಿ ಸದಸ್ಯರರಾದ ವಿ.ಎಸ್​. ವೆಂಕಟಾಚಲ, ಸಂಗಪ್ಪ ದೊಡ್ಡಬಸಪ್ಪ ವಾಲಿಕಾರ್​, ಬಸವರಾಜು ಪಿ. ಭತಮುರ್ಗೆ, ಕಾರ್ಯಕ್ರಮದ ಸಂಯೋಜಕ ಡಾ. ಗಂಗನಾಯಕ್​, ಎಸ್ಸಿ,ಎಸ್ಟಿ ಸಂದ ಅಧ್ಯ ಡಾ.ಸಿ .ರವಿಕುಮಾರ್​ ಮತ್ತಿತರರಿದ್ದರು.