ಕುಂದಾಪುರ : ಕುಂದಾಪುರ ತಾಲೂಕು ಆಡಳಿತದಿಂದ ಅಮರಶಿಲ್ಪಿ ಜಕಣಾಚಾರಿ ಜಯಂತಿ ತಾಲೂಕು ಕಚೇರಿಯಲ್ಲಿ ಬುಧವಾರ ಆಚರಿಸಲಾಯಿತು.
ಉಪತಹಸೀಲ್ದಾರ್ ವಿನಯ ಮತ್ತು ವಿಶ್ವ ಬ್ರಾಹ್ಮಣ ಸಂಘ ಅಧ್ಯಕ್ಷ ವಿ.ಶ್ರೀಧರ ಆಚಾರ ಅಮರಶಿಲ್ಪಿ ಜಕಣಾಚಾರಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಬಳಿಕ ಮಾತನಾಡಿದ ವಿ.ಶ್ರೀಧರ ಆಚಾರ್, ಜಕಣಾಚಾರಿಯವರು ಇಡೀ ವಿಶ್ವದ ಒಂದು ಶ್ರೀಮಂತ ಕಲೆಯಾದ ಶಿಲ್ಪಕಲೆಯ ಪಿತಾಮಹರು. ನಾವು ಅವರ ಜಯಂತಿ ಆಚರಿಸಿ ಗೌರವ ಕೊಡುವುದು ಪುಣ್ಯದ ಕೆಲಸ ಎಂದರು.
ಕುಂದಾಪುರ ತಾಲೂಕು ಗ್ಯಾರಂಟಿ ಸಮಿತಿ ಸದಸ್ಯ ಕೋಣಿ ನಾರಾಯಣ ಆಚಾರ, ಸಂಘ ಉಪಾಧ್ಯಕ್ಷ ರಮಾನಂದ ಆಚಾರ, ವೆಂಕಟೇಶ ಆಚಾರ, ಅಶೋಕ, ಆಚಾರ, ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.