ವಿಜಯ ಶೆಟ್ಟಿ.  
ಜಿಲ್ಲೆ

ಆಳ್ವಾಸ್ ವಿರಾಸತ್ ನುಡಿಸಿರಿ ಕಾರ್ಕಳ ಘಟಕ ರಚನೆ

ಇಂದಿರಾ ಎನ್ ಕೆ

ಕಾರ್ಕಳ: ಆಳ್ವಾಸ್ ವಿರಾಸತ್ ನುಡಿಸಿರಿ ಕಾರ್ಕಳ ಘಟಕ ರಚನೆಯಾಗಿದ್ದು, ಅಧ್ಯಕ್ಷರಾಗಿ ಉದ್ಯಮಿ ವಿಜಯ ಶೆಟ್ಟಿ ಕಾರ್ಕಳ, ಸಂಚಾಲಕರಾಗಿ ಅಜೆಕಾರ್ ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿ ಹಾಗೂ ಕಾರ್ಯದರ್ಶಿಯಾಗಿ ಶಿಕ್ಷಕ ಪ್ರಭಾಕರ್ ಶೆಟ್ಟಿ ಕೊಂಡಳ್ಳಿ ಅವರನ್ನು ಆಯ್ಕೆ ಮಾಡಲಾಯಿತು.

ನ. 17ರಂದು ಹೊಟೇಲ್ ಪ್ರಕಾಶ್‌ನ ಸಂಭ್ರಮ ಸಭಾಂಗಣದಲ್ಲಿ ನಡೆದ ಸಭೆಯಲಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಜರುಗಿತು.

ಗೌರವಾಧ್ಯಕ್ಷರಾಗಿ ಶಾಸಕ ವಿ.ಸುನೀಲ್ ಕುಮಾರ್, ಗೌರವ ಸಲಹೆಗಾರರಾಗಿ ಭುವನೇಂದ್ರ ಕಾಲೇಜು ನಿವೃತ್ತ ಪ್ರಾಂಶುಪಾಲ ಪ್ರೊ. ಪದ್ಮನಾಭ ಗೌಡ, ಉಪಾಧ್ಯಕ್ಷರಾಗಿ ಉದ್ಯಮಿಗಳಾದ ನಿತ್ಯಾನಂದ ಪೈ, ಪದ್ಮಪ್ರಸಾದ್ ಜೈನ್, ಎಲ್‌ಐಸಿ ನಿವೃತ್ತ ಅಧಿಕಾರಿ ಕಿಶೋರ್ ಕುಮಾರ್, ಗೋವಾ ಉದ್ಯಮಿ ಗಣೇಶ್ ಶೆಟ್ಟಿ ಇರ್ವತ್ತೂರು, ಎಸ್‌ವಿಟಿ ಕಾಲೇಜು ನಿವೃತ್ತ ಪ್ರಾಂಶುಪಾಲೆ ಮಿತ್ರಪ್ರಭಾ ಹೆಗ್ಡೆ, ಜಿಪಂ ಮಾಜಿ ಸದಸ್ಯೆ ರೇಶ್ಮಾ ಉದಯ ಶೆಟ್ಟಿ, ಜತೆ ಕಾರ್ಯದರ್ಶಿಯಾಗಿ ರಾಜೇಶ್ ರಾವ್ ಕುಕ್ಕುಂದೂರು, ರಾಮಚಂದ್ರ ನೆಲ್ಲಿಕಾರು, ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ರಾಜೇಶ್ ರೆಂಜಾಳ, ನಿರಂಜನ್ ಜೈನ್, ಕೋಶಾಧಿಕಾರಿಯಾಗಿ ಎಸ್.ಪಾರ್ಶ್ವನಾಥ ವರ್ಮ ಅವರನ್ನು ಆಯ್ಕೆ ಮಾಡಲಾಯಿತು. ಸದಸ್ಯರಾಗಿ ಮಹಾವೀರ ಹೆಗ್ಡೆ ಮುಡಾರು, ಮೋಹನ್ ಕಾರ್ಕಳ, ಹಿತೇಶ್ ಶೆಟ್ಟಿ, ಸಂತೋಷ್ ರಾವ್, ವಿಕ್ರಂ ಹೆಗ್ಡೆ ಕಣಜಾರು, ಅರುಣ್ ಪೂಜಾರಿ ಮಾಂಜ, ಸಂತೋಷ್ ಕುಮಾರ್ ರೆಂಜಾಳ, ಚಿರಂಜಿವಿ, ನರಸಿಂಹ ಕಾಮತ್, ಸುಮಿತ್ ನಲ್ಲೂರು, ಆನಂದ್ರಾಯ ನಾಯಕ್, ಭರತ್ ಕುಮಾರ್ ಜೈನ್, ಅವಿನಾಶ್ ಶೆಟ್ಟಿ ಕಾರ್ಕಳ, ಜ್ಯೋತಿ ರಮೇಶ್, ಶ್ರೀನಿವಾಸ್ ಕಾರ್ಲ, ಮಾಧ್ಯಮ ಪ್ರತಿನಿಧಿಯಾಗಿ ಗಣೇಶ್ ಜಾಲ್ಸೂರು ಅವರನ್ನು ಆಯ್ಕೆ ಮಾಡಲಾಯಿತು. ಪ್ರಭಾಕರ್ ಶೆಟ್ಟಿ ಕೊಂಡಳ್ಳಿ ಕಾರ್ಯಕ್ರಮ ನಿರ್ವಹಿಸಿದರು. ಉಪನ್ಯಾಸಕ ಅಂಬರೀಶ್ ಚಿಪ್ಲೂಣ್ಕರ್ ವಂದಿಸಿದರು.