ಕೂಡ್ಲಿಗಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಇಸ್ರೋ ವಿಜ್ಞಾನಿ ಬಿ.ಎಚ್.ಎಂ.ದಾರುಕೇಶ ಅವರನ್ನು ಸನ್ಮಾನಿಸಲಾಯಿತು. ಪಪಂ ಸದಸ್ಯ ಕೆ.ಎಚ್.ಎಂ.ಸಚಿನ್ ಕುಮಾರ್, ಬೇಡ ಜಂಗಮ ಸಮಾಜದ ಅಧ್ಯಕ್ಷ ಎಚ್.ಎಂ.ಗಂಗಾಧರಸ್ವಾಮಿ, ಎ.ಎಂ. ವಾಗೀಶಮೂರ್ತಿ, ಮಂಜುನಾಥ, ವಿವೇಕ, ಸಂಗಯ್ಯ, ಚನ್ನಬಸಯ್ಯ ಇತರರಿದ್ದರು. 
ಜಿಲ್ಲೆ

ಎಲ್ಲರ ಪರಿಶ್ರಮದಿಂದ ಚಂದ್ರಯಾನ-3 ಯಶಸ್ಸು

ಕೂಡ್ಲಿಗಿ: ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಮುನ್ನುಗ್ಗುತ್ತಿದ್ದು, ವಿಶ್ವದ ಗಮನ ಸೆಳೆಯುತ್ತಿದೆ ಎಂದು ಚಂದ್ರಯಾನ-3 ಯಶಸ್ಸಿನ ರೂವಾರಿಗಳಲ್ಲಿ ಒಬ್ಬರಾದ ಇಸ್ರೋ ವಿಜ್ಞಾನಿ ಬಿ.ಎಚ್.ಎಂ.ದಾರುಕೇಶ ಹೇಳಿದರು.

ಇದನ್ನೂ ಓದಿ: ಚಂದ್ರಯಾನ-3 ಉಡಾವಣೆ ವೇಳೆ ಕೌಂಟ್​ಡೌನ್​ ಧ್ವನಿ ನೀಡಿದ್ದ ISRO ವಿಜ್ಞಾನಿ ಹೃದಯಾಘಾತದಿಂದ ನಿಧನ
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬೇಡ ಜಂಗಮ ಸಮಾಜ ಹಾಗೂ ಕಾಲೇಜು ಆಡಳಿತ ಮಂಡಳಿಯಿಂದ ವಿದ್ಯಾರ್ಥಿಗಳೊಂದಿಗೆ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು.

ವಿಶ್ವಕ್ಕೆ ಮಾದರಿ

ಚಂದ್ರಯಾನ-3 ನಮ್ಮ ಸಾಮರ್ಥ್ಯವನ್ನು ಹೆಚ್ಚಿಸಿದ್ದು, ಅದು ನಮ್ಮ ಗೆಲವು ಎನ್ನುವುದಕ್ಕಿಂತ ನೌಕೆಯನ್ನು ಚಂದ್ರನ ಮೇಲೆ ಇಳಿಸುವುದು ಮುಖ್ಯವಾಗಿತ್ತು. ಅದನ್ನು ನಾವು ಸಾಧಿಸಿದ್ದೇವೆ. ಚಂದ್ರನ ಮೇಲೆ ಕೈಗೊಳ್ಳುವ ನಮ್ಮ ಪ್ರಯೋಗಗಳು ಯಶಸ್ವಿಯಾಗಿ ವಿಶ್ವಕ್ಕೆ ಮಾದರಿಯಾಗಲಿವೆ ಎಂದರು.


ನಮ್ಮ ರಾಕೆಟ್ ವಿನ್ಯಾಸವನ್ನು ಗಾಳಿಯ ಒತ್ತಡ ನಿವಾರಣೆಗೆ ತಕ್ಕಂತೆ ಮಾಡಿದ್ದು, ಅದು ತಿರುಪತಿ ತಿಮ್ಮಪ್ಪನ ಕಿರೀಟದಂತೆ ಕಾಣುತ್ತಿದೆ ಎಂಬುದು ಕಾಕತಾಳೀಯ. ಒಂದು ಕೆಲಸದ ಹಿಂದೆ ಅನೇಕ ಜನರ ಶ್ರಮ ಇರುತ್ತದೆ. ಇದರ ಫಲವೇ ಚಂದ್ರಯಾನ-3 ಯಶಸ್ಸು ಎಂದರು. ಪ್ರಾಚಾರ್ಯೆ ಟಿ.ಕೊತ್ಲಮ್ಮ, ಉಪನ್ಯಾಸಕರಾದ ವೆಂಕಟೇಶ, ಕೆ.ಎಚ್.ಎಂ.ಕೊಟ್ರಮ್ಮ, ಶಿವಕುಮಾರ್, ಪಿಎಸ್‌ಐ ಧನಂಜಯ ಇತರರಿದ್ದರು.