ಬೆಂಗಳೂರು: ಯುವಕ ಎಂಬುದು ಕೇವಲ ವಯೋಮಿತಿ ಆಧರಿಸಿ ನಿರ್ಧರಿಸುವ ವಿಷಯವಲ್ಲ. ಉತ್ಸಾಹ ಚೈತನ್ಯ ಇರುವ ಹಿರಿಯರು ಕೂಡಾ ಒಂದರ್ಥದಲ್ಲಿ ಯುವಕರು ಎಂದು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ವ್ಯಾಖ್ಯಾನಿಸಿದ್ದಾರೆ.
ಚೌಡಯ್ಯ ಮೆಮೋರಿಯಲ್ ಹಾಲ್‌ನಲ್ಲಿ ಡಾ.ಸಿ.ಎನ್.ಅಶ್ವತ್ಥನಾರಾಯಣ ೌಂಡೇಶನ್ ವತಿಯಿಂದ ಆಯೋಜಿಸಲಾಗಿದ್ದ ರಾಷ್ಟ್ರೀಯ ಯುವ ದಿನ ಹಾಗೂ ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸ್ವಾಮಿ ವಿವೇಕಾನಂದರ ದಿನಾಚರಣೆಯನ್ನು ರಾಷ್ಟ್ರೀಯ ಯುವ ದಿನಾಚರಣೆ ಹೆಸರಲ್ಲಿ ಆಚರಿಸಲಾಗುತ್ತದೆ. ಸ್ವಾಮೀಜಿ ಪ್ರಕಾರ ಯುವಕರೆಂದರೆ ಕಬ್ಬಿಣದ ಮಾಂಸಖಂಡ, ಉಕ್ಕಿನ ನರಮಂಡಲ, ಮಿಂಚಿನ ಬುದ್ಧಿಶಕ್ತಿ ಇರುವವರು. ಇತ್ತೀಚಿನ ದಿನಗಳಲ್ಲಿ ಯುವಕರು ಮೊಬೈಲ್ ದಾಸರಾಗಿ ತಮ್ಮ ವಿಚಾರ ಮಾಡುವ ಶಕ್ತಿಯನ್ನೇ ಕಳೆದುಕೊಂಡಿದ್ದಾರೆ. ಕ್ರಿಯಾಶಕ್ತಿ, ಬೌದ್ಧಿಕಶಕ್ತಿ ಹಾಗೂ ಇಚ್ಛಾಶಕ್ತಿ ಇರುವ ವ್ಯಕ್ತಿಗಳಿಂದ ಮಾತ್ರ ಏನಾದರೂ ಸಾಧನೆ ಮಾಡಲು ಸಾಧ್ಯ. ಆ ಕಾರಣದಿಂದಲೇ ಸ್ವಾಮಿ ವಿವೇಕಾನಂದರು ಕೇವಲ 39 ವರ್ಷದ ತಮ್ಮ ಅಲ್ಪ ಅವಧಿಯಲ್ಲಿ ಇಡೀ ವಿಶ್ವವೇ ತಿರುಗಿ ನೋಡುವಂತೆ ಬದುಕಿದರು ಎಂದರು.
ವಿವೇಕಾನಂದರು ರಾಮಕೃಷ್ಣ ಪರಮಹಂಸರ ಶಿಷ್ಯರಾಗಿ ಕೇವಲ ತತ್ವಜ್ಞಾನಿ ಮಾತ್ರವಾಗಿರಲಿಲ್ಲ. ಸ್ವತಃ ಓರ್ವ ವಿಜ್ಞಾನಿಯೂ ಆಗಿದ್ದರು. ಅವರ ಸೂಚನೆ, ಸಂಕಲ್ಪದ ಲವೇ ಟಾಟಾರವರು ಬೆಂಗಳೂರಿನ ಮಲ್ಲೇಶ್ವರದಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯನ್ನು ಸ್ಥಾಪಿಸಿದರು. ‘ಯಾರು ಇತರರಿಗಾಗಿ ಬದುಕತ್ತಾರೆಯೋ ಅವರ ಯಾವಾಗಲೂ ಬದುಕಿರುತ್ತಾರೆ. ಯಾರು ಸ್ವಾರ್ಥಕ್ಕಾಗಿ ಬದುಕುತ್ತಾರೋ ಅವರು ಇರುವಾಗಲೇ ಸತ್ತಿರುತ್ತಾರೆ’ ಎಂಬ ವಿವೇಕಾನಂದರ ಮಾತು ಯುವ ಜನಾಂಗಕ್ಕೆ ದೇಶ ಮತ್ತು ಧರ್ಮಕ್ಕಾಗಿ ದುಡಿಯುವ ಸ್ಪೂರ್ತಿಯನ್ನು ನೀಡುತ್ತದೆ ಎಂದು ಚಕ್ರವರ್ತಿ ವಿವರಿಸಿದರು.
ಸಮಾರಂಭದಲ್ಲಿ ಯುವ ಅನ್‌ಸ್ಟಾಪಬಲ್ ಸಂಸ್ಥಾಪಕ ಅಮಿತಾಬ್ ಶಾಹ್, ವಿದ್ಯಾಶಿಲ್ಪ ವಿವಿ ಮತ್ತು ಶಿಕ್ಷಣ ಸಂಸ್ಥೆಗಳ ಅಧ್ಯಕ್ಷೆ ಡಾ.ಕಿರಣ್ ಪೈ ಮತ್ತು ಲಕ್ಷಾೃನ್ ಕ್ರೀಡಾ ಅಕಾಡೆಮಿ ಸಹ ಸಂಸ್ಥಾಪಕ ಜೀವನ್ ಮಹದೇವ ಅವರಿಗೆ ಸ್ವಾಮಿ ವಿವೇಕಾನಂದ ಯೂತ್ ಅಪ್ರೀಸಿಯೇಷನ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಉಡಾನ್ ಸಂಸ್ಥೆಯ ಸಿಇಓ ಸುಜೀತ್ ಕುಮಾರ್, ಯಾವುದೇ ವ್ಯಕ್ತಿ ತನ್ನ ಚಿಂತನೆ ಮತ್ತು ಪ್ರಯತ್ನದಿಂದ ಗುರಿಮುಟ್ಟಲು ಸಾಧ್ಯ. ಹೊಸ ಸಾಧನೆಗೆ ಹೆಜ್ಜೆ ಇಡುವಾಗ ಪ್ರೋತ್ಸಾಹಕ್ಕಿಂತ ಭಯಪಡಿಸುವವರೇ ಹೆಚ್ಚು, ಆದರೆ ಧೈಯರ್ವಾಗಿ ಮುನ್ನುಗ್ಗಿದವರು ಯಶಸ್ವಿಯಾಗುತ್ತಾರೆ ಎಂದರು.
"ಸ್ವಾಮಿ ವಿವೇಕಾನಂದರು ಭಾರತದ ಮಾತ್ರವಲ್ಲ ಇಡೀ ಜಗತ್ತಿನ ಯುವ ಜನಾಂಗಕ್ಕೆ ಮಾದರಿ. ರಾಷ್ಟ್ರೀಯ ಯುವ ದಿನಾಚರಣೆ ಮೂಲಕ ಯುವಶಕ್ತಿ ವಿವೇಕಾನಂದರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಹಾಗೆ ಮೈಗೂಡಿಸಿಕೊಂಡ ಸಾಧಕರನ್ನು ಇಂದಿನ ಕಾರ್ಯಕ್ರಮದಲ್ಲಿ ಸನ್ಮಾನಿಸುತ್ತಿರುವುದು ಸಂತಸ ತಂದಿದೆ.” -ಡಾ.ಸಿ.ಎನ್.ಅಶ್ವತ್ಥನಾರಾಯಣ, ಮಾಜಿ ಡಿಸಿಎಂ