ದೇವದುರ್ಗ: ಕಾದಂಬರಿಕಾರ ನಾ.ಡಿಸೋಜ ನಾಡುಕಂಡ ಹೆಮ್ಮೆಯ ಸಾಹಿತಿ ಎಂದು ಉಪನ್ಯಾಸಕ ಮರಿಯಪ್ಪ ಕೋರಿ ಹೇಳಿದರು.
ಇದನ್ನೂ ಓದಿ: ನಾ.ಡಿಸೋಜರಿಗೆ ಸಾರ್ವಜನಿಕ ಶ್ರದ್ಧಾಂಜಲಿ
ಪಟ್ಟಣದ ಸಾರ್ವಜನಿಕ ಗ್ರಂಥಾಲಯ ಆವರಣದಲ್ಲಿ ಕಸಾಪದಿಂದ ಆಯೋಜಿಸಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಬುಧವಾರ ಮಾತನಾಡಿದರು. 2014ರಲ್ಲಿ ಮಡಿಕೇರಿಯಲ್ಲಿ ಆಯೋಜಿಸಿದ್ದ 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ಕನ್ನಡ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ, 2007ರಲ್ಲಿ ಶಿವಮೊಗ್ಗ ಕುವೆಂಪು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದುಕೊಂಡಿದ್ದರು. ಡಿಸೋಜ ನಾಡಿನ ಬಹುಮುಖಿ ಪ್ರತಿಭೆಯಾಗಿದ್ದರು.ವೈಚಾರಿಕ ಪ್ರಜ್ಞೆ, ಸರ್ವಧರ್ಮ ಸಹಬಾಳ್ವೆ ಪ್ರತಿಪಾದಕರಾಗಿ ಹಲವು ಗ್ರಂಥ ರಚಿಸಿದ್ದಾರೆ. ಅವರ ನಿಧನ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು.
ಕಸಾಪ ಮಾಜಿ ಕೋಶಾಧ್ಯಕ್ಷ ಹನುಮಂತರಾಯ ನಾಯಕ ಅಂಚೆಸೂಗೂರು ಮಾತನಾಡಿ, ನಾ.ಡಿಸೋಜಗೆ ರಾಜ್ಯೋತ್ಸವ, ಪಂಪ, ಕರ್ನಾಟಕ ಸಾಹಿತ್ಯ ಅಕಾಡೆಮಿ, ನಿರಂಜನ ಪ್ರಶಸ್ತಿ ದೊರಕಿವೆ. 44ಕಾದಂಬರಿ ಬರೆದಿದ್ದು 9ಕಾದಂಬರಿ ಸಿನಿಮಾ ಆಗಿವೆ. ಬೆಂಕಿಯ ಬಲೆ ಚಿತ್ರಕ್ಕೆ ರಾಷ್ಟ್ರಮಟ್ಟದ ರಜತ ಕಮಲ ಪ್ರಶಸ್ತಿ ಹಾಗೂ ದೀಪ ಕಾದಂಬರಿ ಚಲನಚಿತ್ರಕ್ಕೆ ರಾಷ್ಟ್ರೀಯ ಸುವರ್ಣ ಕಮಲ ಪ್ರಶಸ್ತಿ ದೊರಕಿದೆ ಎಂದು ಹೇಳಿದರು.