ರಂಜಾನ್ ಹಬ್ಬದ ನಿಮಿತ್ತ ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠಕ್ಕೆ ಶನಿವಾರ ಭೇಟಿ ನೀಡಿದ್ದ ಮುಸ್ಲಿಮರಿಗೆ ಡಾ.ಸುಬುಧೇಂದ್ರ ತೀರ್ಥರ ಆಶೀರ್ವಾದ ನೀಡಿದರು.  
ಜಿಲ್ಲೆ

ಎಲ್ಲ ಜಾತಿಯವರೂ ಮಂತ್ರಾಲಯದ ರಾಯರನ್ನು ಆರಾಧಿಸುತ್ತಾರೆ

ಶಶಿಧರ ಎಲ್

ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠಕ್ಕೆ ರಂಜಾನ್ ಹಬ್ಬದ ನಿಮಿತ್ತ ಮುಸ್ಲಿಮರು ಶನಿವಾರ ಭೇಟಿ ನೀಡಿ ರಾಯರ ವೃಂದಾವನ ದರ್ಶನ ಪಡೆದರು.

ಮಂತ್ರಾಲಯ ಸೇರಿದಂತೆ ಸುತ್ತಮುತ್ತಲ ಹಲವು ಗ್ರಾಮಗಳ ಮುಸ್ಲಿಮರು ರಾಯರ ವೃಂದಾವನ ದರ್ಶನ ಪಡೆದು ಶ್ರೀಮಠದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರಿಂದ ಆಶೀರ್ವಾದ ಪಡೆದುಕೊಂಡರು.

ಡಾ.ಸುಬುಧೇಂದ್ರ ತೀರ್ಥರ ಆಶೀರ್ವಚನ

ಈ ಸಂದರ್ಭದಲ್ಲಿ ಡಾ.ಸುಬುಧೇಂದ್ರ ತೀರ್ಥರು ಆಶೀರ್ವಚನ ನೀಡಿ, ರಾಯರನ್ನು ಎಲ್ಲ ಜಾತಿ, ಮತ, ಪಂಥದ ಜನರು ಪೂಜಿಸುತ್ತಿದ್ದಾರೆ. ಎಲ್ಲರೂ ಅವರ ಧರ್ಮವನ್ನು ಪಾಲನೆ ಮಾಡುವುದರ ಜತೆಗೆ ಇತರ ಧರ್ಮಿಯರೊಂದಿಗೆ ಸಾಮರಸ್ಯದಿಂದ ಇರಬೇಕು ಎಂದು ಹೇಳಿದರು.

ಈ ಸಂದರ್ಭ ಶ್ರೀಮಠದ ವ್ಯವಸ್ಥಾಪಕ ಎಸ್.ಕೆ.ಶ್ರೀನಿವಾಸರಾವ್, ವಿದ್ಯಾಪೀಠದ ನಿವೃತ್ತ ಪ್ರಾಚಾರ್ಯ ಡಾ.ವಾದಿರಾಜಾಚಾರ್ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.