ರಂಜಾನ್​ ಹಿನ್ನೆಲೆ ಇಫ್ತಿಯಾರ್ ಕೂಟದಲ್ಲಿ ಭಾಗಿಯಾಗಿ ಭಾವೈಕ್ಯತೆ ಮೆರೆದ ಹಿಂದು-ಮುಸ್ಲಿಂ ಬಾಂಧವರು

Ramadan Iftar party
Published on

ಬಾಗಲಕೋಟೆ: ಪವಿತ್ರ ರಂಜಾನ್ ಹಬ್ಬದ ಅಂಗವಾಗಿ ಒಂದು ತಿಂಗಳುಗಳ ಕಾಲ ನಡೆಯುವ ಉಪವಾಸ ವ್ರತದ ಹಿನ್ನೆಲೆಯಲ್ಲಿ ಬಾಗಲಕೋಟೆಯಲ್ಲಿ ಮುಸ್ಲಿಂ ಸಮಾಜದವರಿಗೆ ಇಫ್ತಿಯಾರ್​ ಕೂಟ ಆಯೋಜನೆ ಮಾಡಲಾಗಿತ್ತು.

ಬಾಗಲಕೋಟೆಯ ನವನಗರದ ಈದ್ಗಾ ಮಸೀದಿಯಲ್ಲಿ ಆಯೋಜಿಸಲಾಗಿದ್ದ ಇಫ್ತಿಯಾರ್​ ಕೂಟದಲ್ಲಿ ಹಿಂದು-ಮುಸ್ಲಿಂ ಬಾಂಧವರಿಬ್ಬರು ಭಾಗಿಯಾಗುವ ಮೂಲಕ ಭಾವೈಕ್ಯತೆಯನ್ನು ಮೆರೆದರು.

ಪರಸ್ಪರ ಶುಭ

ಇಪ್ತಿಯಾರ್​ ಕೂಟ ಆರಂಭಕ್ಕೂ ಮೊದಲು ಸ್ಥಳೀಯ ಈದ್ಗಾ ಮಸೀದಿಯಲ್ಲಿ ಪ್ರಾರ್ಥನೆಯನ್ನು ಸಲ್ಲಿಸಲಾಯಿತು. ನಂತರ ಹಿಂದು-ಮುಸ್ಲಿಂ ಬಾಂಧವರಿಬ್ಬರೂ ಪರಸ್ಪರ ಶುಭ ಕೋರಿ ಇಫ್ತಿಯಾರ್​ ಕೂಟದಲ್ಲಿ ಭಾಗಿಯಾದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ನೆಟ್ಟಿಗರ ಮೆಚ್ಚುಗೆ ಗಳಿಸಿದೆ.

ಅಂದಹಾಗೆ ರಂಜಾನ್ ಮಾಸದಲ್ಲಿ ಮುಸ್ಲಿಂ ಬಾಂಧವರು ನಸುಕಿನಿಂದ ಸಂಜೆಯವರೆಗೆ ಉಪವಾಸ ಮಾಡುತ್ತಾರೆ. ಒಂದು ಹನಿ ನೀರು ಕುಡಿಯದೆ ತಮ್ಮ ಕಾಯಕವನ್ನೂ ಮಾಡುತ್ತಾರೆ. ಏಪ್ರಿಲ್​ 21ರಂದು ರಂಜಾನ್​ ಉಪವಾಸಕ್ಕೆ ತೆರೆ ಬೀಳಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net