ಬೆಂಗಳೂರು: ನಗರದ ಕಾಂತ್ರಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ನಿಗದಿತ ವೇಳಾಪಟ್ಟಿಯಲ್ಲಿ ರೈಲುಗಳು ಬರದಿರುವ ಕಾರಣಕ್ಕೆ ನೂರಾರು ಪ್ರಯಾಣಿಕರು ಪರದಾಡಿದರು.
ಹಲವು ಎಕ್ಸ್ಪ್ರೆಸ್ ರೈಲುಗಳು ಆಗಮಿಸಿಲ್ಲ
ಬೆಂಗಳೂರಿನಿಂದ ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ ಸೇರಿ ವಿವಿಧ ಕಡೆಗೆ ತೆರಳಲು ಪ್ರಯಾಣಿಕರು ರೈಲು ನಿಲ್ದಾಣಕ್ಕೆ ಆಗಮಿಸಿದ್ದರು. ಆದರೆ, ರೈಲು ನಿಲ್ದಾಣದಲ್ಲಿ ಟ್ರ್ಯಾಕ್ಗಳ ಸಿಗ್ನಲ್ ತೊಂದರೆ ಇರುವುದರಿಂದ ಹಾಗೂ ಮಾಲೂರಿನಲ್ಲಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಚೆನ್ನೈ, ಆಂಧ್ರ ಪ್ರದೇಶ ಮತ್ತು ತೆಲಂಗಾಣದಿಂದ ಬೆಂಗಳೂರಿಗೆ ಬರಬೇಕಿದ್ದ ಕೋಚುವಲ್ಲಿ ಎಕ್ಸ್ಪ್ರೆಸ್, ಗೋಲ್ಗುಂಬಜ್, ಬಸವ, ವಿಶ್ವಮಾನವ ಟುಟಿಕೋರನ್ ಸೇರಿ ಹಲವು ಎಕ್ಸ್ಪ್ರೆಸ್ ರೈಲುಗಳು ಇನ್ನು ಬೆಂಗಳೂರು ನಿಲ್ದಾಣಕ್ಕೆ ಆಗಮಿಸಿಲ್ಲ.
ಇದನ್ನೂ ಓದಿ: ದರದಲ್ಲೂ, ಗುಣಮಟ್ಟದಲ್ಲೂ ನಂದಿನಿಗಿಲ್ಲ ಸಾಟಿ; ಬೇರೆ ಹಾಲು ಖರೀದಿಸಿದರೆ ಗ್ರಾಹಕರಿಗೆ ಹೊರೆ
ಹಾರಿಕೆಯ ಉತ್ತರ
ಊರಿಗೆ ಹೋಗುಲು ಧಾವಂತದಲ್ಲಿದ್ದ ಪ್ರಯಾಣಿಕರಿಗೆ ತುಂಬಾ ತೊಂದರೆಯಾಗಿದೆ. ಬೆಳಗ್ಗೆಯಿಂದ ರೈಲು ನಿಲ್ದಾಣಕ್ಕೆ ಒಂದೇ ಒಂದು ರೈಲು ಬಂದಿಲ್ಲ. ರೈಲುಗಳು ವಿಳಂಬ ಆಗಮನದ ಬಗ್ಗೆ ರೈಲ್ವೆ ಇಲಾಖೆ ಅಧಿಕಾರಿಗಳು ಮುನ್ನೆಚ್ಚರಿಕೆ ಆಗಿ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಪ್ರಯಾಣಿಕರು ತೊಂದರೆಗೆ ಸಿಲುಕುವಂತಾಗಿದೆ. ಇದರ ಬಗ್ಗೆ ರೈಲು ಅಧಿಕಾರಿಗಳನ್ನು ಪ್ರಶ್ನಿಸಿದರೆ, ಹಾರಿಕೆಯ ಉತ್ತರ ಕೊಡುತ್ತಿದ್ದಾರೆ. ಹೀಗಾಗಿ ಪ್ರಯಾಣಿಕರು ಆಕ್ರೋಶ ಹೊರಹಾಕಿದ್ದಾರೆ.
ವೇಳಾಪಟ್ಟಿ ಬದಲಾವಣೆ
ಬೆಳಗಿನ ವೇಳಾಪಟ್ಟಿಯ ರೈಲುಗಳೇ ಇನ್ನು ನಿಲ್ದಾಣಕ್ಕೆ ಆಗಮಿಸದೇ ಇರುವ ಕಾರಣ ಮಧ್ಯಾಹ್ನ, ಸಂಜೆ ಹಾಗೂ ರಾತ್ರಿಯ ರೈಲು ವೇಳಾಪಟ್ಟಿಯಲ್ಲೂ ಬದಲಾವಣೆ ಆಗುವ ಸಾಧ್ಯತೆ ಇದೆ. ಬೆಂಗಳೂರಿಗೆ ಬರುತ್ತಿರುವ ಪ್ರಯಾಣಿಕರು ಕೂಡ ರೈಲಿನಲ್ಲೇ ಸಿಲುಕಿ ತೊಂದರೆ ಅನುಭವಿಸುವಂತಾಗಿದೆ.
ಇದನ್ನೂ ಓದಿ: ಭವಾನಿ ಹೆಸರು ಪದೇ ಪದೇ ಪ್ರಸ್ತಾಪ: ಎಚ್‌ಡಿಕೆ ಮೇಲೆ ರೇವಣ್ಣ ಪರೋಕ್ಷ ಅಸಮಾಧಾನ
ಅಧಿಕಾರಿಗಳ ಬೇವಾಬ್ದಾರಿ
ರೈಲುಗಳ ವಿಳಂಬದ ಬಗ್ಗೆ ನಿನ್ನೆ ರೈಲ್ವೆ ಇಲಾಖೆ ಸುತ್ತೋಲೆ ಹೊರಡಿಸಿದೆ. ಆದರೆ, ಇಲ್ಲೂ ಅಧಿಕಾರಿಗಳ ಬೇಜವಾಬ್ದಾರಿ ಎದ್ದು ಕಾಣುತ್ತಿದೆ. ಪ್ರಯಾಣಿಕರಿಗೆ ಈ ಬಗ್ಗೆ ಮೊದಲೇ ತಿಳಿಸದೇ ನಿನ್ನೆ ರಾತ್ರಿ ಸುತ್ತೋಲೆ ಹೊರಡಿಸಿದೆ. ಇದು ಅನೇಕ ಪ್ರಯಾಣಿಕರಿಗೆ ತಿಳಿಯದೇ ಇಂದು ರೈಲು ನಿಲ್ದಾಣಕ್ಕೆ ಆಗಮಿಸಿದ ಪ್ರಯಾಣಿಕರಿಗೆ ಅಕ್ಷರಶಃ ಶಾಕ್ ಕಾದಿತ್ತು. ಇದರಿಂದ ಪ್ರಯಾಣಿಕರು ರೈಲ್ವೆ ಇಲಾಖೆ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದಾರೆ.
ನಿನ್ನೆ ರೈಲ್ವೆ ಇಲಾಖೆ ಹೊರಡಿಸಿರುವ ಸುತ್ತೋಲೆ
ಗಟ್ಟಿಯಾಗಿ ತಬ್ಬಿ ಗುಪ್ತಾಂಗವನ್ನು ಮುಟ್ಟಿದ: ಡ್ರೆಸ್ಸಿಂಗ್ ರೂಮಲ್ಲಿ ನಡೆದ ಕರಾಳ ಘಟನೆ ಬಿಚ್ಚಿಟ್ಟ ನಟಿ ಮಾಳವಿಕಾ
ಸೊಂಟ ಹಿಡಿದು ನಿತಂಬ ಮುಟ್ಟಿದರು: ಸದ್ದುಗುಂಟೆಪಾಳ್ಯ SI ವಿರುದ್ಧ ಸರಣಿ ಟ್ವೀಟ್ ಮಾಡಿ ಮಹಿಳೆ ಕಣ್ಣೀರು