More

    ಚಿನ್ನ ಆಮದು ಇಳಿಕೆ; 11 ತಿಂಗಳಿನಲ್ಲಿ ಶೇ.30% ತಗ್ಗಿದ ಪ್ರಮಾಣ

    ಕಳೆದ ಹಣಕಾಸು ವರ್ಷದಲ್ಲಿ ಭಾರತದ ಚಿನ್ನದ ಆಮದು ಪ್ರಮಾಣ ಸುಮಾರು ಶೇ. 30 ಕಡಿಮೆಯಾಗಿದೆ. ವಾಣಿಜ್ಯ ಸಚಿವಾಲಯ ಈ ಅಂಕಿ-ಅಂಶ ನೀಡಿದೆ. ಹೆಚ್ಚಿನ ಸೀಮಾ ಸುಂಕ ಮತ್ತು ಜಾಗತಿಕ ಆರ್ಥಿಕ ಅನಿಶ್ಚಿತತೆಯ ಕಾರಣ ಚಿನ್ನದ ಆಮದು ಇಳಿಕೆಯಾಗಿದೆ ಎಂದು ಹೇಳಲಾಗುತ್ತಿದೆ. ಕಳೆದ ವರ್ಷ ಭಾರತ ಒಟ್ಟಾರೆ 31.8 ಬಿಲಿಯನ್ ಡಾಲರ್ ಮೌಲ್ಯದ ಚಿನ್ನ ಆಮದು ಮಾಡಿಕೊಂಡಿದೆ.

    ಆಮದು ಕುಸಿತ ಏಕೆ?

    ಚಿನ್ನದ ಮೇಲಿನ ಹೆಚ್ಚಿನ ಆಮದು ಸುಂಕ ವಿಧಿಸಲಾಗಿದೆ. ಜತೆಗೆ ಜಾಗತಿಕ ಆರ್ಥಿಕ ಅನಿಶ್ಚಿತತೆಗಳು ಆಮದು ಕುಸಿತಕ್ಕೆ ಕಾರಣವಾಗಿವೆ. ಭಾರತ ವಾರ್ಷಿಕ 800-900 ಟನ್ ಚಿನ್ನ ಆಮದು ಮಾಡಿಕೊಳ್ಳುತ್ತದೆ. ಕಳೆದ ಹಣಕಾಸು ವರ್ಷದಲ್ಲಿ ಚಿನ್ನ, ಆಭರಣಗಳ ರಫ್ತು ಶೇ 0.3 ಕುಸಿದು 35.2 ಶತಕೋಟಿ ಡಾಲರ್​ಗೆ ತಲುಪಿದೆ. ಚಾಲ್ತಿ ಖಾತೆ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಕಳೆದ ವರ್ಷ ಚಿನ್ನದ ಮೇಲಿನ ಆಮದು ಸುಂಕವನ್ನು ಶೇ.10.75ರಿಂದ ಶೇ.15ಕ್ಕೆ ಹೆಚ್ಚಿಸಿತ್ತು.

    • 2021-22ನೇ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಚಿನ್ನದ ಲೋಹದ ಆಮದು 45.2 ಬಿಲಿಯನ್ ಡಾಲರ್ ಆಗಿತ್ತು. ಈಗ 31.8 ಬಿಲಿಯನ್ ಡಾಲರ್​ಗೆ ಇಳಿಕೆ
    • 2022ರ ಆಗಸ್ಟ್​​ನಿಂದಲೇ ಚಿನ್ನದ ಆಮದು ಇಳಿಮುಖ.
    • ಕಳೆದ ಹಣಕಾಸು ವರ್ಷದಲ್ಲಿ ಬೆಳ್ಳಿ ಆಮದು ಶೇ. 66 ಏರಿಕೆಯಾಗಿ 5.3 ಶತಕೋಟಿ ಡಾಲರ್ ಆಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts