ಮದ್ಯವರ್ಜನ ಶಿಬಿರದಲ್ಲಿ ಉಡುಪಿ ಜಿಲ್ಲಾ ವಿ.ಹಿಂ.ಪ. ಉಪಾಧ್ಯಕ್ಷ ವೈ.ವಿಜಯಕುಮಾರ್ ಶೆಟ್ಟಿ ಗೋಳಿಯಂಗಡಿ ಅವರನ್ನು ಗೌರವಿಸಲಾಯಿತು 
ಜಿಲ್ಲೆ

ಆರ್ಡಿಯಲ್ಲಿ ಮದ್ಯವರ್ಜನ ಶಿಬಿರ

ಇಂದಿರಾ ಎನ್ ಕೆ

ಆರ್ಡಿ: ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಆರ್ಡಿ, ಬೆಳ್ವೆ ವಲಯ ಹಾಗೂ ವಿವಿಧ ಸಂಘ-ಸಂಸ್ಥೆಗಳ ಆಶ್ರಯದಲ್ಲಿ ಆರ್ಡಿ ಚಿತ್ತೇರಿ ಶ್ರೀದುರ್ಗಾಪರಮೇಶ್ವರಿ ಸಿದ್ಧಿವಿನಾಯಕ ದೇವಸ್ಥಾನದ ಸಮೀಪದ ಕಮಲ ವಿಠ್ಠಲ ಸಭಾಭವನದಲ್ಲಿ 1869ನೇ ಮದ್ಯವರ್ಜನ ಶಿಬಿರ ಇತ್ತೀಚೆಗೆ ನಡೆಯಿತು.

ಉಡುಪಿ ಜಿಲ್ಲಾ ವಿ.ಹಿಂ.ಪ. ಉಪಾಧ್ಯಕ್ಷ ವೈ.ವಿಜಯಕುಮಾರ್ ಶೆಟ್ಟಿ ಗೋಳಿಯಂಗಡಿ ಅವರನ್ನು ಗೌರವಿಸಲಾಯಿತು. ಮದ್ಯವರ್ಜನ ಶಿಬಿರದ ವ್ಯವಸ್ಥಾಪನಾ ಸಮಿತಿ ಆರ್ಡಿ ಅಧ್ಯಕ್ಷ ಸುರೇಶ ಶೆಟ್ಟಿ ಆರ್ಡಿ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ಹೆಬ್ರಿ ತಾಲೂಕು ಯೋಜನಾಧಿಕಾರಿ ಲೀಲಾವತಿ, ಬೆಳ್ವೆ ವಲಯ ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಒಕ್ಕೂಟ ಅಧ್ಯಕ್ಷ ಕೃಷ್ಣ ಪುತ್ರನ್ ಆರ್ಡಿ, ಬೆಳ್ವೆ ವಲಯ ಜನಜಾಗೃತಿ ವೇದಿಕೆ ಅಧ್ಯಕ್ಷ ಎಚ್.ವಸಂತಕುಮಾರ್ ಶೆಟ್ಟಿ ಬೆಳ್ವೆ, ಪತ್ರಕರ್ತ ಕೆ.ಸಂಜೀವ ಆರ್ಡಿ, ಶಿಬಿರಾಧಿಕಾರಿ ವಿದ್ಯಾಧರ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಬೆಳ್ತಂಗಡಿ ಆರೋಗ್ಯ ಸಹಾಯಕಿ ಜಯಲಕ್ಷ್ಮೀ, ಬೆಳ್ವೆ ವಲಯ ಮೇಲ್ವಿಚಾರಕ ರಾಘವೇಂದ್ರ ಗೌಡ ಮತ್ತಿತರರು ಉಪಸ್ಥಿತರಿದ್ದರು.