ಅಳವಂಡಿಯಲ್ಲಿ ಅಯೋಧ್ಯೆಯ ಆಮಂತ್ರಣ ಪತ್ರಿಕೆ, ಅಕ್ಷತೆಯನ್ನು ಬಂಜರಂಗದಳದ ಕಾರ್ಯಕರ್ತರಿಗೆ ಅರ್ಚಕ ಮಲ್ಲಾರಭಟ್ ಜೋಶಿ ನೀಡಿದರು.  
ಜಿಲ್ಲೆ

ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ಸಂಭ್ರಮದಿಂದ ಆಚರಿಸಿ

ಅಳವಂಡಿ: ಗ್ರಾಮದ ಮಾರುತೇಶ್ವರ ದೇವಸ್ಥಾನದಲ್ಲಿ ವಿಶ್ವ ಹಿಂದು ಪರಿಷತ್, ಬಜರಂಗದಳ, ಆರ್‌ಎಸ್‌ಎಸ್‌ನಿಂದ ಶನಿವಾರ ಅಯೋಧ್ಯೆಯ ರಾಮ ಮಂದಿರ ಉದ್ಘಾಟನೆಯ ಆಮಂತ್ರಣ ಪತ್ರಿಕೆ ಹಾಗೂ ಅಕ್ಷತೆಗೆ ಪೂಜೆ ಸಲ್ಲಿಸಲಾಯಿತು.

ಆಮಂತ್ರಣ ಪತ್ರಿಕೆ ಹಾಗೂ ಅಕ್ಷತೆಗೆ ಪೂಜೆ

ಭೈರಾಪುರ ಶ್ರೀರಾಮ ಮಂದಿರದ ಅರ್ಚಕ ಮಲ್ಲಾರಭಟ್ ಜೋಶಿ ಮಾತನಾಡಿ, ಅಯೋಧ್ಯೆಯಲ್ಲಿ ಜ.22 ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ಜರುಗಲಿದೆ. ಅಂದು ಪ್ರತಿ ಗ್ರಾಮಗಳಲ್ಲಿ ದೇವಸ್ಥಾನದಲ್ಲಿ ಎಲ್‌ಇಡಿ ಟಿವಿ ಮೂಲಕ ನೇರಪ್ರಸಾರದ ವ್ಯವಸ್ಥೆ ಮಾಡಬೇಕು. ಭಜನೆ, ಕೀರ್ತನೆ, ಶ್ರೀರಾಮ ಮಂತ್ರ ಪಾರಾಯಣ ಮಾಡಬೇಕು. ಸಂಜೆ ಮನೆಯ ಮುಂದೆ ದೀಪಗಳನ್ನು ಬೆಳಗಿ ಸಂಭ್ರಮಿಸಿ ಶ್ರೀರಾಮನನ್ನು ಆರಾಧಿಸಬೇಕು ಎಂದರು.

ಪ್ರಮುಖರಾದ ತಿಪ್ಪಣ್ಣ ಜೋಶಿ, ಬಜರಂಗದಳದ ಹೋಬಳಿ ಘಟಕದ ಕಾರ್ಯ ಸಂಚಾಲಕ ಮಹಾಂತೇಶ ಸುಣಗಾರ, ಪ್ರಮುಖರಾದ ದೇವಪ್ಪ ಕಟ್ಟಿಮನಿ, ವೀರಣ್ ಟುಬಾಕಿ, ಪ್ರಶಾಂತ ಮ್ಯಾಗಡೆ, ಸಾರ ಆರೇರ, ಶರಣಪ್ಪ ಪೂಜಾರ ಇನ್ನಿತರರಿದ್ದರು.