ಅಳವಂಡಿ ಸಮೀಪದ ಕುಣಕೇರಿ ಕೆಎಚ್‌ಪಿಟಿಯಿಂದ ನಡೆದ ನಾಯಕತ್ವ ಮತ್ತು ಸಂವಹನ ಶಿಬಿರಕ್ಕೆ ಭೂದಾನಿ ಹುಚ್ಚಮ್ಮ ಅವರನ್ನು ಆರತಿ ಬೆಳಗಿ ಸ್ವಾಗತಿಸಲಾಯಿತು.  
ಜಿಲ್ಲೆ

ಕರ್ನಾಟಕ ಆರೋಗ್ಯ ಸಂವರ್ಧನಾ ಪ್ರತಿಷ್ಠಾನ ಕಾರ್ಯಗಳು ಶ್ಲಾಘನೀಯ

ಅಳವಂಡಿ: ಹೆಣ್ಣುಮಕ್ಕಳು ಎದುರಿಸುತ್ತಿರುವ ಎಲ್ಲ ತರಹದ ತಾರತಮ್ಯ ತೊಡೆದು ಹಾಕಲು ಪ್ರಯತ್ನಿಸಬೇಕು. ಶಿಕ್ಷಣಕ್ಕೆ ಪ್ರೋತ್ಸಾಹಿಸಿ ಸಮಾನಭಾವದಿಂದ ನೋಡಬೇಕು ಎಂದು ಭೂದಾನಿ ಹುಚ್ಚಮ್ಮ ಚೌದ್ರಿ ತಿಳಿಸಿದರು.

ಸಮೀಪದ ಕುಣಕೇರಿ ಗ್ರಾಮದಲ್ಲಿ ಕರ್ನಾಟಕ ಆರೋಗ್ಯ ಸಂವರ್ಧನಾ ಪ್ರತಿಷ್ಠಾನ (ಕೆಎಚ್‌ಪಿಟಿ)ದಿಂದ ಶನಿವಾರ ನಡೆದ ನಾಯಕತ್ವ ಮತ್ತು ಸಂವಹನ ಶಿಬಿರದಲ್ಲಿ ಮಾತನಾಡಿದರು. ಹದಿಹರೆಯದ ಹೆಣ್ಣುಮಕ್ಕಳಿಗೆ ಅನೇಕ ತರಬೇತಿ ಹಾಗೂ ಚಟುವಟಿಕೆ ಮೂಲಕ ಧೈರ್ಯ ತುಂಬುವ ಕೆಲಸ ಮಾಡುತ್ತಿರುವ ಕೆಎಚ್‌ಪಿಟಿ ಕಾರ್ಯಗಳು ಶ್ಲಾಘನಾರ್ಹ ಎಂದರು.

ಕೆಎಚ್‌ಪಿಟಿ ಕ್ಷೇತ್ರ ಸಂಯೋಜಕಿ ಶಿವಲೀಲಾ ಹಿರೇಮಠ ಮಾತನಾಡಿ, ನಾಯಕತ್ವ ಹಾಗೂ ಸಂವಹನ ಶಿಬಿರಗಳು ಹೆಣ್ಣು ಮಕ್ಕಳಲ್ಲಿ ಹೊಂದಾಣಿಕೆ, ಸಹಕಾರ, ನಾಯಕತ್ವ, ಧೈರ್ಯ ಹಾಗೂ ನಂಬಿಕೆ ಬೆಳೆಸಿಕೊಳ್ಳಲು ಸಹಕಾರಿಯಾಗಿವೆ ಎಂದರು.

ಮುಖ್ಯ ಶಿಕ್ಷಕ ಗವಿಸಿದ್ದಪ್ಪ, ಕ್ಷೇತ್ರ ಸಂಯೋಜನ ರಾಘವೇಂದ್ರ, ಪ್ರಮುಖರಾದ ನೇತ್ರಾವತಿ, ಉದಯಾ, ಸಮುದಾಯ ಸಂಘಟಕರಾದ ಬಾಳಮ್ಮ, ಪೂಜಾ, ನೀಲಮ್ಮ, ಸಾವಿತ್ರಮ್ಮ, ಶಿವಲೀಲಾ, ಪದ್ಮಾ, ಶೋಭಾ, ಸವಿತಾ, ವಿಜಯಲಕ್ಷ್ಮೀ, ಅಶ್ವಿನಿ, ಸುನಿತಾ, ಶ್ವೇತಾ ಇದ್ದರು.