ಅಳವಂಡಿ ಸಮೀಪದ ಹಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪುಸ್ತಕ ಕುಟೀರ ಉದ್ಘಾಟನಾ ಕಾರ್ಯಕ್ರಮಕ್ಕೆ ಗಣ್ಯರು ಚಾಲನೆ ನೀಡಿದರು. ಪ್ರಮುಖರಾದ ರಾಮಪ್ಪ, ದ್ಯಾಮಣ್ಣ, ರಮೇಶ, ಲಕ್ಕನಗೌಡ, ಪರಶುರಾಮ, ಹನುಮಂತಪ್ಪ ಇತರರು ಇದ್ದರು. 
ಜಿಲ್ಲೆ

ಪುಸ್ತಕಗಳು ಶೈಕ್ಷಣಿಕ ಅಭಿವೃದ್ಧಿಗೆ ಸಹಕಾರಿ

ಅಳವಂಡಿ: ಶಿಕ್ಷಣದಿಂದ ಮಾತ್ರ ಗ್ರಾಮ ಹಾಗೂ ದೇಶಗಳ ಅಭಿವೃದ್ದಿ ಸಾಧ್ಯ ಎಂದು ಗ್ರಾಪಂ ಉಪಾಧ್ಯಕ್ಷ ನಿಂಗನಗೌಡ ಪಾಟೀಲ ತಿಳಿಸಿದರು.
ಸಮೀಪದ ಹಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಟ್ಟಿ ಐಸಿರಿ ನಿಸ್ವಾರ್ಥ ಶಿಕ್ಷಣ ಸೇವಾ ಬಳಗ ಹಾಗೂ ವಿವಿಧ ಸಂಘಟನೆಯಿಂದ ಆರಂಭವಾದ ಪುಸ್ತಕ ಕುಟೀರಕ್ಕೆ (ಗ್ರಂಥಾಲಯ)ಚಾಲನೆ ನೀಡಿ ಮಂಗಳವಾರ ಮಾತನಾಡಿದರು. ಶಾಲೆ ಕಾಲೇಜುಗಳಲ್ಲಿ ಗ್ರಂಥಾಲಯಗಳಲ್ಲಿ ಪೂರಕ ಪುಸ್ತಕಗಳನ್ನು ಒದಗಿಸುವುದರಿಂದ ಶೈಕ್ಷಣಿಕ ಅಭಿವೃದ್ಧಿಗೆ ಸಹಕಾರಿಯಾಗಲಿವೆ ಎಂದರು.

ಶಿಕ್ಷಣದಿಂದ ದೇಶ ಅಭಿವೃದ್ಧಿ

ಗ್ರಾಮೀಣ ಭಾಗದಲ್ಲಿ ಮೂಲ ಸೌಕರ್ಯಗಳ ಕೊರತೆಯಿಂದ ವಿದ್ಯಾಭ್ಯಾಸದಲ್ಲಿ ಮಕ್ಕಳು ಹಿಂದಿಳಿಯುತ್ತಿದ್ದಾರೆ. ಗ್ರಾಮಸ್ಥರು, ವಿವಿಧ ಸಂಘಟನೆಗಳು ಈ ಕೊರತೆಯನ್ನು ನೀಗಿಸಬೇಕು ಅಂದಾಗ ಮಾತ್ರ ಶೈಕ್ಷಣಿಕ ಪ್ರಗತಿ ಸಾಧ್ಯ ಎಂದರು. ಐಸಿರಿ ನಿಸ್ವಾರ್ಥ ಶಿಕ್ಷಣ ಸೇವಾ ಬಳಗದ ಸಂಚಾಲಕ ದ್ಯಾಮಣ್ಣ ಕರಿಗಾರ ಮಾತನಾಡಿ, ಗ್ರಾಮದ ಮಕ್ಕಳು ಶಿಕ್ಷಣದ ಗುಣಮಟ್ಟ ಸುಧಾರಿಸಲು ಶಾಲೆಯಲ್ಲಿ ಗ್ರಂಥಾಲಯ ಸ್ಥಾಪಿಸಲಾಗುತ್ತಿದೆ. ಮಕ್ಕಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗಲು ಅನುಕೂಲವಾಗಲಿದೆ. ಡಿಜಿಟಲ್ ಗ್ರಂಥಾಲಯ ಸ್ಥಾಪನೆಗೆ ಗ್ರಾಮದ ಮುಖಂಡರಾದ ಲಕ್ಕನಗೌಡ ಗೌಡ್ರ, ರಮೇಶ ಹಳ್ಳಿಕೇರಿ ಜಾಗ ನೀಡಲು ಮುಂದೆ ಬಂದಿದ್ದಾರೆ. ನಿಂಗನಗೌಡ ಪಾಟೀಲ ಹಾಗೂ ಇತರ ದಾನಿಗಳು ಗ್ರಂಥಾಲಯಕ್ಕೆ ಪುಸ್ತಕ ನೀಡಲಿದ್ದಾರೆ. ಇದು ಮಕ್ಕಳ ಓದಿಗೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಸಹಕಾರಿಯಾಗಲಿದೆ ಎಂದರು.

ಪ್ರಮುಖರಾದ ರಾಮಪ್ಪ ಕರಿಗಾರ, ಈರಮ್ಮ ಬಂಡಿ, ಶೇಖಪ್ಪ ಮೈನಳ್ಳಿ, ರಮೇಶ ಹಳ್ಳಿಕೇರಿ, ಲಕ್ಕನಗೌಡ ಗೌಡ್ರ, ಪರಶುರಾಮ ನಾಗಣ್ಣವರ, ಯಮನೂರಪ್ಪ ಶಿಂಟ್ರ, ಆಂಜನೇಯ, ಭರಮಪ್ಪ ಶಿಂಟ್ರ, ಗುಡದಪ್ಪ ಮೇಟಿ, ನೀಲಪ್ಪ ಕರಿಗಾರ, ಮುದಕಪ್ಪ ಶಿಂಟ್ರ, ಬಿ.ಎನ.ಹೊರಪೇಟಿ, ಮುಖ್ಯ ಶಿಕ್ಷಕರಾದ ಹನುಮಂತಪ್ಪ ಗುಡಿ ಇತರರಿದ್ದರು.