More

    ಒಂದೇ ಗಂಟೆಯಲ್ಲಿ 100% ಸಬ್​ಸ್ಕ್ರಿಪ್ಶನ್​; ಗ್ರೇ ಮಾರುಕಟ್ಟೆಯಲ್ಲಿ ಡಬಲ್​ ರೇಟ್​; ನಿಮ್ಮ ಹಣವೂ ದುಪ್ಪಟ್ಟಾಗಬಹುದು…

    ನವದೆಹಲಿ: ಈಗಷ್ಟೇ ತೆರೆಯಲಾದ ಈ ಐಪಿಒ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಿದೆ. ಕೇವಲ ಒಂದೇ ಗಂಟೆಯಲ್ಲಿ 100% ಚಂದಾದಾರಿಕೆ (ಸಬ್​ಸ್ಕ್ರಿಪ್ಶನ್​) ಆಗಿದೆ .

    ಇದು ಬಿಎಲ್​ಎಸ್​ ಇ- ಸವೀರ್ಸ್​ (BLS E-Services) ಐಪಿಒ. ಮಂಗಳವಾರ ಜನವರಿ 30 ರಂದು ಈ ಐಪಿಒ ಪ್ರಾರಂಭವಾಗಿದೆ. ತೆರೆದ ತಕ್ಷಣವೇ ಸಂಪೂರ್ಣ ಚಂದಾದಾರರಾಗಿಕೆಯಾಗಿದ್ದು, ಮಂಗಳವಾರ ಮಧ್ಯಾಹ್ನ 12ರವರೆಗೆ 4ಕ್ಕೂ ಹೆಚ್ಚು ಪಟ್ಟು ಚಂದಾದಾರಿಕೆ ಬಂದಿದೆ. ಅಂದರೆ, ಐಪಿಒದಲ್ಲಿ ನೀಡಲಾಗುವ ಒಟ್ಟು ಷೇರುಗಳಿಗೆ ಹೋಲಿಸಿದರೆ, ಖರೀದಿಗೆ ಕೋರಿ ಸಲ್ಲಿಸಲಾಗಿರುವ ಅರ್ಜಿಗಳ ಒಟ್ಟು ಷೇರಿನ ಪ್ರಮಾಣದ 4 ಪಟ್ಟು ಅಧಿಕವಾಗಿದೆ.

    ಮಧ್ಯಾಹ್ನ 12 ಗಂಟೆಯವರೆಗಿನ ಅಂಕಿಅಂಶಗಳ ಪ್ರಕಾರ, ಈ ಐಪಿಒ 4.39 ಪಟ್ಟು ಚಂದಾದಾರಿಕೆಯಾಗಿದೆ. ಇನ್ನು ಚಿಲ್ಲರೆ ವಿಭಾಗದಲ್ಲಿ 14.82 ಪಟ್ಟು ಚಂದಾದಾರಿಕೆಯನ್ನು ಸ್ವೀಕರಿಸಲಾಗಿದೆ. ಅರ್ಹ ಸಾಂಸ್ಥಿಕ ಹೂಡಿಕೆದಾರರ ವಿಭಾಗದಲ್ಲಿ 2.04 ಬಾರಿ ಚಂದಾದಾರಿಕೆ ಬಂದಿದೆ. ಇದೇ ಸಮಯದಲ್ಲಿ, ಸಾಂಸ್ಥಿಕವಲ್ಲದ ಹೂಡಿಕೆದಾರರ ವಿಭಾಗದಲ್ಲಿ 4.88 ಪಟ್ಟು ಚಂದಾದಾರಿಕೆಯನ್ನು ಸ್ವೀಕರಿಸಲಾಗಿದೆ.

    ಹೂಡಿಕೆದಾರರ ಈ ಬಲವಾದ ಬೇಡಿಕೆಗೆ ಕಾರಣವೆಂದರೆ ಗ್ರೇ ಮಾರ್ಕೆಟ್ ಪ್ರೀಮಿಯಂ (ಜಿಎಂಪಿ).

    ಬೆಲೆ ಪಟ್ಟಿ ಏನು?:

    10 ರೂಪಾಯಿ ಮುಖಬೆಲೆಯ ಈ ಷೇರುಗಳಿಗೆ, ಕಂಪನಿಯು ಪ್ರತಿ ಷೇರಿಗೆ 129ರಿಂದ 135 ರೂಪಾಯಿ ಪ್ರೈಸ್​ ಬ್ಯಾಂಡ್​ ನಿಗದಿಪಡಿಸಲಾಗಿದೆ. ಈ ಐಪಿಒಗೆ 108 ಷೇರುಗಳ ಲಾಟ್​ ಮಾಡಲಾಗಿದೆ.

    ಈ ಐಪಿಒದಲ್ಲಿ ಷೇರು ಖರೀದಿಸಬಯಸುವವರು ಕನಿಷ್ಠ 108 ಷೇರುಗಳನ್ನು ಖರೀದಿಸಬೇಕು. ಹೀಗಾಗಿ ಹೂಡಿಕೆದಾರರು ಕನಿಷ್ಠ 14,850 ರೂ.ಗಳ ಬಾಜಿ ಕಟ್ಟಬೇಕಾಗುತ್ತದೆ. ಯಾವುದೇ ಚಿಲ್ಲರೆ ಹೂಡಿಕೆದಾರರೊಬ್ಬರು ಗರಿಷ್ಠ 1404 ಷೇರುಗಳ ಖರೀದಿಗೆ ಅರ್ಜಿ ಸಲ್ಲಿಸಬಹುದು.

    ಇನ್ವೆಸ್ಟರ್ ಗೇನ್ ವರದಿಯ ಪ್ರಕಾರ, BLS e-Services IPO ಗ್ರೇಮಾರ್ಕೆಟ್‌ನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಮಂಗಳವಾರ ಐಪಿಒ 158 ರೂಪಾಯಿ ಪ್ರೀಮಿಯಂನಲ್ಲಿ ವಹಿವಾಟು ನಡೆಸುತ್ತಿದೆ. ಈ ಕಾರಣದಿಂದಾಗಿ ಹೂಡಿಕೆದಾರರು ತಮ್ಮ ಹಣವನ್ನು ಮೊದಲ ದಿನದಲ್ಲಿಯೇ ದ್ವಿಗುಣಗೊಳ್ಳಬಹುದು ಎಂದು ನಿರೀಕ್ಷಿಸುತ್ತಾರೆ. ಗ್ರೇಮಾರ್ಕೆಟ್​ನ ಈಗಿನ ಪ್ರವೃತ್ತಿ ಮುಂದುವರಿದಿದರೆ ಮಾರುಕಟ್ಟೆಯಲ್ಲಿ ಈ ಷೇರು 300 ರೂಪಾಯಿಯ ಆಸುಪಾಸಿನಲ್ಲಿ ಲಿಸ್ಟಿಂಗ್​ ಆಗಬಹುದಾಗಿದೆ. ಹೀಗಾದರೆ, ಮೊದಲ ದಿನವೇ ಹೂಡಿಕೆದಾರರ ಹಣವು ಮೊದಲ ದಿನವೇ ದುಪ್ಪಟ್ಟು ದಾಟಲಿದೆ.

    ಈ ಐಪಿಒ ಗಾತ್ರವು 310.91 ಕೋಟಿ ರೂಪಾಯಿ ಆಗಿದೆ. ಕಂಪನಿಯು ಐಪಿಒ ಮೂಲಕ 2.3 ಕೋಟಿ ತಾಜಾ ಷೇರುಗಳನ್ನು ನೀಡಬಹುದು. ಫೆಬ್ರವರಿ 1 ರವರೆಗೆ ಹೂಡಿಕೆದಾರರಿಗೆ ಈ ಐಪಿಒ ಮುಕ್ತವಾಗಿರುತ್ತದೆ. ಅಂದರೆ, ಫೆ. 1ರವರೆಗೂ ನೀವು ಈ ಐಪಿಒದಲ್ಲಿ ಷೇರು ಪಡೆಯಲು ಅರ್ಜಿ ಸಲ್ಲಿಸಹುದು. ಷೇರು ಮಾರುಕಟ್ಟೆಯಲ್ಲಿ ಈ ಕಂಪನಿಯ ಷೇರುಗಳನ್ನು ಫೆಬ್ರವರಿ 6ರಂದು ಪಟ್ಟಿ ಮಾಡಬಹುದಾಗಿದೆ.

    ಭಾರತದಲ್ಲಿನ ಪ್ರಮುಖ ಬ್ಯಾಂಕ್‌ಗಳಿಗೆ ವ್ಯಾಪಾರ ಪತ್ರ ವ್ಯವಹಾರ ಸೇವೆಗಳು, ನೆರವಿನ ಇ-ಸೇವೆಗಳು ಮತ್ತು ಭಾರತದಲ್ಲಿ ತಳಮಟ್ಟದಲ್ಲಿ ಇ-ಆಡಳಿತ ಸೇವೆಗಳನ್ನು ಒದಗಿಸುವ ಡಿಜಿಟಲ್ ಸೇವಾ ಪೂರೈಕೆದಾರ ಕಂಪನಿ ಇದಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts