ಅಳವಂಡಿ: ಪ್ರತಿಯೊಂದು ಮಗುವಿನಲ್ಲಿ ಪ್ರತಿಭೆ ಅಡಕವಾಗಿರುತ್ತದೆ. ಅದನ್ನು ಅನಾವರಣ ಮಾಡುವ ಜವಾಬ್ದಾರಿ ಪಾಲಕರು, ಶಿಕ್ಷಕರ ಜೊತೆಗೆ ಶಿಕ್ಷಣ ಸಂಸ್ಥೆಗಳ ಮೇಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಂಕರಯ್ಯ.ಟಿ.ಎಸ್. ತಿಳಿಸಿದರು.
ಗ್ರಾಮದ ಶ್ರೀಸಿದ್ಧೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜ್‌ನಲ್ಲಿ ಗ್ರಾಮ ಪಂಚಾಯಿತಿ ಅಳವಂಡಿ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ, ಸಾಂಸ್ಕೃತಿಕ ಸಮಾರಂಭ ಹಾಗೂ ಸಮಾರೋಪ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಬಹುಮಾನ ವಿತರಿಸಿ ಶುಕ್ರವಾರ ಮಾತನಾಡಿದರು. ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಗ್ರಾಮ ಪಂಚಾಯಿತಿ ಕೂಡಾ ಕೈಜೋಡಿಸಿದೆ. ಇದನ್ನು ಮಕ್ಕಳು ಪ್ರತಿಭೆ ಅನಾವರಣಕ್ಕೆ ಸದುಪಯೋಗಪಡಿಸಿಕೊಳ್ಳಬೇಕು. ಸ್ಪರ್ಧೆಯಲ್ಲಿ ನಿರ್ಣಾಯಕರ ಪಾತ್ರ ಪ್ರಮುಖವಾಗಿದೆ. ನ್ಯಾಯದ ತೀರ್ಪಿನಿಂದ ನಿಜವಾದ ಪ್ರತಿಭೆ ಹೊರ ಬರಲಿದೆ ಎಂದರು.
ಇದನ್ನೂ ಓದಿ: ಚಿರ ಯುವಕನಂತೆ ಕಾಣುವ ಅಜ್ಜನ ಹೆಲ್ತ್ ಸೀಕ್ರೆಟ್ ಏನು ಗೊತ್ತಾ ? ಕೇಳಿದ್ರೆ ನೀವು ಬೆರಗಾಗೋದು ಗ್ಯಾರಂಟಿ !
ಗ್ರಾಪಂ ಅಧ್ಯಕ್ಷೆ ಶಂಕ್ರಮ್ಮ ಜೋಗಿನ, ಉಪಾಧ್ಯಕ್ಷೆ ಶಾರವ್ವ ಇಳಿಗೇರ, ಪಿಡಿಒ ಕೊಟ್ರಪ್ಪ ಅಂಗಡಿ, ಕಾರ್ಯದರ್ಶಿ ಬಸವರಾಜ, ಶಿಕ್ಷಣ ಸಂಯೋಜಕ ಭೀಮಣ್ಣ, ಪ್ರಾಚಾರ್ಯ ಚಂದ್ರಶೇಖರ, ಹಿರಿಯ ಶಿಕ್ಷಕ ವಿ.ಎಚ್.ಪುಲೇಶಿ, ಪ್ರಮುಖರಾದ ಗ್ಯಾನಪ್ಪ ಹಳ್ಳಿಕೇರಿ, ವಿಷ್ಣು ಅರ್ಕಸಾಲಿ, ಡಿ.ಜಿ.ಲಕ್ಕನಗೌಡರ, ಸಿಆರ್‌ಪಿ ವಿಜಯಕುಮಾರ ಟಿಕಾರೆ ಹಾಗೂ ಶಿಕ್ಷಕರು, ಮಕ್ಕಳು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.