ಜಿಲ್ಲೆ

ರೈತರಿಗೆ ಮಾಹಿತಿ ನೀಡಲು ಅಗ್ರಿವಾರ್ ಘಟಕ: ಜಿಕೆವಿಕೆಯಲ್ಲಿ ಕಾರ್ಯನಿರ್ವಹಣೆ- ಕೃಷಿ ವಿವಿಯಿಂದ ಮಾರುಕಟ್ಟೆ ವ್ಯವಸ್ಥೆ

kumarvrl

ಬೆಂಗಳೂರು: ರೈತರ ಬೆಳೆಗಳಿಗೆ ಸ್ಥಳೀಯವಾಗಿ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ‘ಅಗ್ರಿವಾರ್ ಘಟಕ’ ಮತ್ತು ಜಿಲ್ಲಾ ಸಮನ್ವಯ ಸಮಿತಿ ರಚಿಸಿದೆ. ಅಗ್ರಿವಾರ್ ಘಟಕವು ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ) ಮಾಹಿತಿ ತಂತ್ರ ಜ್ಞಾನ ಕೇಂದ್ರದಲ್ಲಿ ಕಾರ್ಯನಿರ್ವಹಿಸಲಿದ್ದು, ತಜ್ಞರು ರೈತರಿಗೆ ಸಲಹೆ ಮತ್ತು ಮಾಹಿತಿ ಒದಗಿಸಲಿದ್ದಾರೆ.

ವಿಜ್ಞಾನಿಗಳಿಂದಲೇ ಮಾಹಿತಿ: ಬೆಂ.ಕೃಷಿ ವಿ.ವಿ.ಯ (ಯುಎಎಸ್​ಬಿ) ಅಗ್ರಿವಾರ್ ಘಟಕವು ಜಿಕೆವಿಕೆ ಮುಖ್ಯ ದ್ವಾರದಲ್ಲಿರುವ ಕೃಷಿ ತಂತ್ರಜ್ಞಾನ ಮಾಹಿತಿ ಕೇಂದ್ರದಲ್ಲಿ ಕಾರ್ಯ ರೈತರಿಗೆ ಸೂಕ್ತ ತಾಂತ್ರಿಕ ಮಾಹಿತಿಯನ್ನು ಒದಗಿಸುತ್ತಿದೆ. ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ರೈತರ ಉತ್ಪನ್ನಗಳಿಗೆ ಮಾರುಕಟ್ಟೆಯ ವ್ಯವಸ್ಥೆ ಕಲ್ಪಿಸಲು ಈ ಘಟಕವು ಸಹಕರಿಸುತ್ತದೆ.

ಕೋವಿಡ್-19 ಸಮಯದಲ್ಲಿ ರೈತರು ಕೈಗೊಳ್ಳಬೇಕಾದ ಕೃಷಿ ಚಟುವಟಿಕೆಗಳು ಮತ್ತು ಮುಂಜಾಗ್ರತಾ ಕ್ರಮಗಳ ಬಗ್ಗೆಯೂ ಸಹ ಮಾಹಿತಿಯನ್ನು ನೀಡುವುದಲ್ಲದೆ, ರೈತ ಬಾಂಧವರು ಈ ಸೌಲಭ್ಯವನ್ನು ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗೆ 080-23627889 ಸಂರ್ಪಸಬಹುದು.

ಜಿಲ್ಲಾ ಮಟ್ಟದ ಸಮನ್ವಯ ಸಮಿತಿ: ವಿವಿ ವ್ಯಾಪ್ತಿಯ 10 ಜಿಲ್ಲೆಗಳಲ್ಲಿನ ರೈತರಿಗೆ ಅನುಕೂಲವಾಗುವಂತೆ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ರಚಿಸಲಾಗಿದೆ. ಬೆಂ.ನಗರ (97411 09113), ಬೆಂ.ಗ್ರಾಮಾಂತರ (94498 66928), ಮಂಡ್ಯ (94448 475515), ಹಾಸನ (94498 66932), ತುಮಕೂರು (94498 66936), ಚಿಕ್ಕಬಳ್ಳಾಪುರ (94498 66930), ಕೋಲಾರ (98453 84244), ಮೈಸೂರು (94491 37362), ಚಾಮರಾಜನಗರ (94482 39727) ಹಾಗೂ ರಾಮನಗರ (94498 66918) ಜಿಲ್ಲೆಗಳ ಸಮಿತಿಗಳನ್ನು ಸಂರ್ಪಸಬಹುದು.