ಸುಳ್ಯ: ತಾಲೂಕಿನ ಮಂಡೆಕೋಲು ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಮುಂದುವರಿದಿದ್ದು ಭಾನುವಾರ ರಾತ್ರಿ ಕಲ್ಲಡ್ಕ, ಎರ್ಕಲ್ಪಾಡಿ, ಪೆರ್ದೋಡಿ, ಮಾವಂಜಿ, ಹೊಸೊಕ್ಲು ಭಾಗದಲ್ಲಿ ಕೃಷಿಕರ ತೋಟಗಳನ್ನು ಪುಡಿಗೈದಿವೆ.
ಭಾನುವಾರ ರಾತ್ರಿ ವೇಳೆ ಕಾಡಾನೆಗಳ ಒಂದು ಗುಂಪು ಕಲ್ಲಡ್ಕ, ಎರ್ಕಲ್ಪಾಡಿ ಭಾಗದಲ್ಲಿ ತೋಟಕ್ಕೆ ನುಗ್ಗಿ ಕೃಷಿ ಬೆಳೆಗಳನ್ನು ನಾಶಗೊಳಿಸಿದರೆ ಮತ್ತೊಂದು ಹಿಂಡು ಪೆರ್ದೋಡಿ ಭಾಗದಲ್ಲಿ ಕೃಷಿ ತೋಟಗಳಿಗೆ ನುಗ್ಗಿವೆ. ಹೊಸೊಕ್ಲು ಭಾಗದಲ್ಲಿ ರಾಮಚಂದ್ರ ಗೌಡ, ದಾಸಪ್ಪ ಗೌಡ ಹಾಗೂ ಕೊರಗಪ್ಪ ಗೌಡ ಎಂಬುವರ ತೋಟಕ್ಕೆ ನುಗ್ಗಿದ ಆನೆಗಳ ಹಿಂಡು ಅಡಕೆ ಹಾಗೂ ಬಾಳೆಗಿಡಗಳನ್ನು ಧ್ವಂಸಗೈದಿವೆ.