ಕಂಪ್ಲಿ ತಾಲೂಕಿನ ದೇವಸಮುದ್ರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬೆಂಕಿ ನಂದಿಸುವ ಕುರಿತು ಪ್ರಾತ್ಯಕ್ಷಿಕೆ ನಡೆಯಿತು. ಪ್ರಮುಖರಾದ ಬಿ.ಶಿವಕುಮಾರ್, ರಾಜಾಸಾಬ್, ಡಾ.ರೇವಣಸಿದ್ಧ ಕೋರಿ, ತಾಜ್‌ಬೀ, ಚನ್ನಬಸವರಾಜ ಇತರರಿದ್ದರು. 
ಜಿಲ್ಲೆ

ಅಗ್ನಿ ನಂದಿಸುವ ಕೌಶಲ ಅಗತ್ಯ

Kopala - Desk - Eraveni

ಕಂಪ್ಲಿ: ದೇವಸಮುದ್ರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕುರುಗೋಡು ಅಗ್ನಿಶಾಮಕ ಠಾಣೆ ಅಧಿಕಾರಿಗಳಿಂದ ಬೆಂಕಿ ನಂದಿಸುವ ಬಗ್ಗೆ ಪ್ರಾತ್ಯಕ್ಷಿಕೆ, ತರಬೇತಿ ಕಾರ್ಯಕ್ರಮ ಸೋಮವಾರ ನಡೆಯಿತು.

ಉಪ ಠಾಣಾಧಿಕಾರಿ ಬಿ.ಶಿವಕುಮಾರ ಮಾತನಾಡಿ, ಆರೋಗ್ಯ ಕೇಂದ್ರದಲ್ಲಿ ಉಂಟಾಗುವ ಅಗ್ನಿ ಅವಘಡಗಳನ್ನು ಸಮರ್ಥವಾಗಿ ನಂದಿಸುವ ಕೌಶಲ ತಿಳಿಸಿಕೊಡಲು ಈ ಕಾರ್ಯಕ್ರಮ ಸಹಕಾರಿಯಾಗಲಿದೆ.

ಎಲೆಕ್ಟ್ರಿಕಲ್ ವೈರ್, ವಿದ್ಯುತ್ ಸಲಕರಣೆ, ಅನಿಲ ಮತ್ತು ಇತರೆ ವಸ್ತುಗಳಿಗೆ ಬೆಂಕಿ ಹತ್ತಿದರೆ ನಂದಿಸುವ ವಿಧಾನವನ್ನು ಪ್ರಾತ್ಯಕ್ಷಿಕೆ ಮೂಲಕ ತಿಳಿಸಲಾಗುವುದು ಎಂದರು.

ವೈದ್ಯಾಧಿಕಾರಿ ರೇವಣಸಿದ್ಧ ಕೋರಿ ಮಾತನಾಡಿ, ಆಕಸ್ಮಿಕ ಅವಘಡಗಳನ್ನು ಎದುರಿಸುವ ಬಗ್ಗೆ ತಿಳಿದಿದ್ದರಿಂದ ಆತ್ಮಸ್ಥೈರ್ಯ ಉಂಟಾಯಿತು. ಈ ತರಬೇತಿ ಆಸ್ಪತ್ರೆಯಲ್ಲಿನ ಗುಣಾತ್ಮಕ ಸೇವೆ, ಸೌಲಭ್ಯ ಪರಿಗಣಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ ಎಂದರು.