ಸಿರವಾರ ಪಪಂಯಲ್ಲಿ ಅರಕೇರಾ ಅಗ್ನಿಶಾಮಕ ಠಾಣೆ ವತಿಯಿಂದ ಅಗ್ನಿಶಾಮಕ ಸೇವಾ ಸಪ್ತಾಹ ನಡೆಸಲಾಯಿತು.  
ಜಿಲ್ಲೆ

ಅಗ್ನಿ ಅವಘಡ ತಡೆಗೆ ಸಪ್ತಾಹ ಸಹಕಾರಿ

ಶಶಿಧರ ಎಲ್

ಸಿರವಾರ: ಬೆಂಕಿ ಅವಘಡ ಸಂಭವಿಸಿದಾಗ ನಂದಿಸಲು, ನೀರು ಮತ್ತು ಮರಳನ್ನು ಸುರಿಯಬೇಕೆಂದು ಅರಕೇರಾ ಅಗ್ನಿಶಾಮಕ ಠಾಣಾಧಿಕಾರಿ ಮಾಕಾರ್ಂಡಯ್ಯ ಸ್ವಾಮಿ ಹಿರೇಮಠ ಮಾಹಿತಿ ನೀಡಿದರು.

ಪಟ್ಟಣ ಪಂಚಾಯತಿ ಕಚೇರಿಯ ಆವರಣದಲ್ಲಿ ಅಗ್ನಿಶಾಮಕ ಠಾಣೆ ಅರಕೇರಾಯಿಂದ ಬುಧವಾರ ಹಮಮಿಕೊಂಡಿದ್ದ ಅಗ್ನಿಶಾಮಕ ಸೇವಾ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಗ್ನಿ ಅವಘಡಗಳನ್ನು ತಡೆಗಟ್ಟಲು ಪ್ರತಿ ವರ್ಷ ಸಪ್ತಾಹ ಹಮ್ಮಿಕೊಳ್ಳಲಾಗುತ್ತದೆ. ಸೀಮೆ ಎಣ್ಣೆ, ಪೆಟ್ರೋಲ್ ಹಾಗೂ ಎಣ್ಣೆ ಪದಾರ್ಥಗಳಿಗೆ ಅಗ್ನಿ ಸ್ಪರ್ಶವಾದಾಗ ನೀರು ಸುರಿದರೆ ಬೆಂಕಿಯ ಜ್ವಾಲೆ ಹೆಚ್ಚಾಗುತ್ತದೆ ಅದಕ್ಕೆ ನೀರು ಹಾಕುವ ಬದಲಿಗೆ ಮರಳು ಹಾಕಬೇಕೆಂದರು.

ಅಗ್ನಿ ಅವಘಡ ನಡೆದಾಗ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಜಾಗೃತಿ ಮೂಡಿಸಲಾಯಿತು. ಸಿಬ್ಬಂದಿಗಳಾದ ಸೈಯದ್ ಅಭಿರು ಹುಸೇನ್, ಅರುಣ ಕುಮಾರ್, ಹನುಮಂತರಾಯ, ಪಪಂ ಸಿಬ್ಬಂದಿ ಲಕ್ಷ್ಮೀ, ಪದ್ಮಾ, ಚಾಂದಪಾಷ ಇತರರಿದ್ದರು.