ಜಿಲ್ಲೆ

ಫ್ಲೆಕ್ಸ್​ ಸಂಘರ್ಷ: ವಿಹಿಂಪ-ಬಜರಂಗದಳ ಕಾರ್ಯಕರ್ತರಿಂದ ಮತ್ತೆ ಸಾವರ್ಕರ್​ ಫ್ಲೆಕ್ಸ್ ಅಳವಡಿಕೆ..

Webdesk - Ravikanth

ತುಮಕೂರು: ಜಿಲ್ಲೆಯಲ್ಲಿ ಉಂಟಾಗಿದ್ದ ಫ್ಲೆಕ್ಸ್ ಸಂಘರ್ಷ ಮುಂದುವರಿದಿದ್ದು, ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಕಾರ್ಯಕರ್ತರು ಪುನಃ ವಿನಾಯಕ ದಾಮೋದರ್ ಸಾವರ್ಕರ್​ ಅವರ ಫ್ಲೆಕ್ಸ್ ಅಳವಡಿಸಿದ್ದಾರೆ. ಈ ಮೂಲಕ ಸಾವರ್ಕರ್​ ಫ್ಲೆಕ್ಸ್ ಕಿತ್ತುಹಾಕಿದ್ದ ಕಿಡಿಗೇಡಿಗಳಿಗೆ ಎದಿರೇಟು ನೀಡಿದ್ದಾರೆ.

ತುಮಕೂರಿನ ಅಶೋಕ್ ರಸ್ತೆಯಲ್ಲಿ ಮೊನ್ನೆ ರಾತ್ರಿ ಅಳವಡಿಸಲಾಗಿದ್ದ ವೀರ ಸಾವರ್ಕರ್ ಅವರ ಫ್ಲೆಕ್ಸ್​​ಅನ್ನು ಕಿಡಿಗೇಡಿಗಳು ಹರಿದು ಹಾಕಿದ್ದರು. ತುಮಕೂರು ಮಹಾನಗರ ಪಾಲಿಕೆಯಿಂದ ರಸ್ತೆ ಬದಿ ಅಳವಡಿಸಿದ್ದ ಫ್ಲೆಕ್ಸ್​ಗಳನ್ನು ತೆರವುಗೊಳಿಸಲಾಗಿತ್ತು.

ಆದರೆ ಇಂದು ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಕಾರ್ಯಕರ್ತರು ಇಂದು ತುಮಕೂರಿನ ಟೌನ್​ಹಾಲ್​ ಸರ್ಕಲ್​ನಲ್ಲಿರುವ ಗಣಪತಿ ದೇವಸ್ಥಾನದ ಎದುರು ಇಂದು ಸಂಜೆ ಸಾರ್ವಕರ್​ ಫ್ಲೆಕ್ಸ್ ಅಳವಡಿಸಿದ್ದಾರೆ. ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ತುಮಕೂರು ನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿದ್ದರು.