ಜಿಲ್ಲೆ

ಎನ್‌ಎಸ್‌ಎಸ್‌ನಿಂದ ಕೈಕಂಬ ಗ್ರಾಮ ದತ್ತು ಸ್ವೀಕಾರ

ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತದ ಕೆ.ಎಸ್.ಎಸ್. ಕಾಲೇಜಿನ ಎನ್‌ಎಸ್‌ಎಸ್ ಘಟಕ ಬಿಳಿನೆಲೆ ಕೈಕಂಬ ಗ್ರಾಮವನ್ನು ಅಭಿವೃದ್ಧಿಗಾಗಿ ದತ್ತು ಗ್ರಾಮವಾಗಿ ಸ್ವೀಕರಿಸಿದೆ.

ಇದರ ಮೊದಲ ಕಾರ್ಯಯೋಜನೆಯನ್ನು ಸೋಮವಾರ ಚಾಲನೆಗೊಳಿಸಲಾಯಿತು. ಸರ್ಕಾರದ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು.

ಬಿಳಿನೆಲೆ ಗ್ರಾ.ಪಂ. ಅಧ್ಯಕ್ಷೆ ಶಾರದಾ ದಿನೇಶ್ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ. ಸದಸ್ಯರಾದ ಮುರಳೀಧರ ಎರ್ಮಾಯಿಲ್, ಭವ್ಯಾ ಕುಕ್ಕಾಜೆ, ಬಿಳಿನೆಲೆ ಕೈಕಂಬ ಯುವಕ ಮಂಡಲ ಅಧ್ಯಕ್ಷ ಶಿವಪ್ರಸಾದ್ ನಡುತೋಟ, ಪೂರ್ವಾಧ್ಯಕ್ಷ ವಿಜಯಕುಮಾರ್ ನಡುತೋಟ, ಕೆಎಸ್‌ಎಸ್ ಕಾಲೇಜಿನ ಐಕ್ಯುಎಸಿ ಘಟಕದ ಸಂಯೋಜಕಿ ಲತಾ ಬಿ.ಟಿ, ಎನ್‌ಎಸ್‌ಎಸ್ ಯೋಜನಾಧಿಕಾರಿ ಆರತಿ ಸೇರಿದಂತೆ ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಮೊದಲ ದಿನದ ಯೋಜನೆಯಂತೆ ಕೈಕಂಬ-ಪಿಲಿಕಜೆ-ನಡುತೋಟ-ಹೊಸೊಕ್ಲು-ಗುಂಡಿಗದ್ದೆ ರಸ್ತೆಯ ಗುಂಡಿ ಮುಚ್ಚಲಾಯಿತು.