ಜಿಲ್ಲೆ

ನಿರ್ಮಲಕಟ್ಟೆಯಲ್ಲಿ ಅಡಕೆ ಕಳವು

ಬೆಳ್ತಂಗಡಿ: ಸುಲ್ಕೇರಿಮೊಗ್ರು ಗ್ರಾಮದ ನಿರ್ಮಲ ಕಟ್ಟೆ ಎಂಬಲ್ಲಿ ಮನೆಯಿಂದ ಅಡಕೆ ಕಳ್ಳತನ ಮಾಡಲಾಗಿದೆ. ಸ್ಥಳೀಯ ನಿವಾಸಿ ನಾರಾಯಣ ಮಡಿವಾಳ ಎಂಬುವರು ದೂರು ನೀಡಿದ್ದು, ಮನೆ ಮಹಡಿಯ ಮೇಲಿನ ಕೋಣೆಯಲ್ಲಿ ಸುಳಿದ ಒಣಅಡಕೆ ಇಟ್ಟಿದ್ದರು. ಕಳ್ಳರು ಕೋಣೆಯ ಬಾಗಿಲನ್ನು ತೆಗೆದು ಒಳಗೆ ಇರಿಸಿದ್ದ ಅಡಕೆ ಕಳವು ಮಾಡಿದ್ದಾರೆ ಎಂದು ದೂರು ನೀಡಲಾಗಿದೆ. ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

\https://www.vijayavani.net/onam-celebrations