ಬಳ್ಳಾರಿಯ ಗಡಗಿ ಚೆನ್ನಪ್ಪ ವೃತ್ತದಲ್ಲಿ ಜಿಲ್ಲಾ ಕರವೇ ಸದಸ್ಯರು ನಟ ಕಮಲ್‌ಹಾಸನ್ ಭಾವಚಿತ್ರದ ಪ್ರತಿಕೃತಿ ದಹನ ಮಾಡಿ ಪ್ರತಿಭಟನೆ ನಡೆಸಿದರು. ಜಿಲ್ಲಾಧ್ಯಕ್ಷ ಅಂಗಡಿ ಶಂಕ್ರಪ್ಪ, ಪ್ರಮುಖರಾದ ಕೆ.ಎಂ.ಶಿವಕುಮಾರ, ಜಿ.ತಿಪ್ಪಾರೆಡ್ಡಿ, ರಾಜು, ಆನಂದಗೌಡ, ಆತ್ಮನಂದ ರೆಡ್ಡಿ, ದೇವರಾಜ ಇತರರಿದ್ದರು. 
ಜಿಲ್ಲೆ

ನಟ ಕಮಲ್‌ಹಾಸನ್ ಕ್ಷಮೆ ಯಾಚಿಸಲಿ

ಬಳ್ಳಾರಿ: ತಮಿಳು ಚಿತ್ರನಟ ಕಮಲ್‌ಹಾಸನ್ ನೀಡಿದ ಕನ್ನಡ ಭಾಷೆ ಬಗ್ಗೆ ಅವಹೇಳನಕಾರಿ ಹೇಳಿಕೆಯನ್ನು ಖಂಡಿಸಿ ಅವರ ನಟನೆಯ ಥಗ್‌ಲೈಫ್ ಸಿನಿಮಾ ರಾಜ್ಯದಲ್ಲಿ ಬಿಡುಗಡೆ ಗೊಳಿಸದಂತೆ ಆಗ್ರಹಿಸಿ ನಗರದ ಗಡಗಿ ಚೆನ್ನಪ್ಪ ವೃತ್ತದಲ್ಲಿ ಜಿಲ್ಲಾ ಕರವೇ ಸದಸ್ಯರಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ಜಿಲ್ಲಾಧ್ಯಕ್ಷ ಅಂಗಡಿ ಶಂಕ್ರಪ್ಪ ಮಾತನಾಡಿ, ತಮಿಳು ನಟ ಕಮಲ್‌ಹಾಸನ್ ವಿವಾದಾತ್ಮಕ ಹೇಳಿಕೆ ನೀಡಿರುವುದು ಖಂಡನೀಯ. ನಟ ಕಮಲ್‌ಹಾಸನ್ ಕನ್ನಡಿಗರಿಗೆ ಕ್ಷಮೆ ಯಾಚಿಸಬೇಕು. ಇಲ್ಲವಾದರೆ ಕರ್ನಾಟಕದಲ್ಲಿ ಅವರ ನಟನೆಯ ಥಗ್‌ಲೈಫ್ ಸಿನಿಮಾ ಪ್ರದರ್ಶನವನ್ನು ತಡೆಯಲಾಗುವುದು. ಚಿತ್ರದ ವಿತರಕರು ಹೂಡಿದ ಬಂಡವಾಳ ರಕ್ಷಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಹಸೀಲ್ದಾರ್ ಪ್ರಶಾಂತ ಕುಮಾರ ಮಿಶ್ರಾಗೆ ಮನವಿ ಸಲ್ಲಿಸಿದರು.