ಬಳ್ಳಾರಿ: ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ (Renukaswamy Murder Case) ಜೈಲು ಸೇರಿರುವ ನಟ ದರ್ಶನ್ಗೆ (Actor Darshan) ದಿನ ಕಳೆದಂತೆ ಬೆನ್ನು ನೋವು ಹೆಚ್ಚಾಗಿದ್ದು, ಅವರನ್ನು ವಿಮ್ಸ್ಗೆ ಸ್ಥಳಾಂತರಿಸಲಾಗಿದೆ. ಕಳೆದ ಕೆಲ ದಿನಗಳಿಂದ ಬೆನ್ನು ನೋವು (Back Pain) ತೀವ್ರವಾಗಿ ಕಾಡುತ್ತಿದ್ದು, ಈ ಕಾರಣಕ್ಕಾಗಿ ಅವರನ್ನು ವಿಮ್ಸ್ಗೆ ಸ್ಥಳಾಂತರಿಸಲಾಗಿದೆ.
ದರ್ಶನ್ಗೆ (Darshan) ಬೆನ್ನು ನೋವು (Back Pain) ತೀವ್ರವಾಗಿ ಕಾಡಿದ ಪರಿಣಾಮ ಜೈಲಿಗೆ ಆರ್ಥೋ (Ortho) ಹಾಗೂ ನ್ಯೊರೋ ವೈದ್ಯರು ಜೈಲಿಗೆ ಭೇಟಿ ನೀಡಿ ತಪಾಸಣೆ ನಡೆಸಿದ್ದರು. MRI ಹಾಗೂ CT Scan ಮಾಡಬೇಕಾಗಿರುವ ಕಾರಣ ದರ್ಶನ್ರನ್ನು ವೈದ್ಯರ ಸಲಹೆ ಮೇರೆಗೆ ಬಿಗಿ ಭದ್ರತೆಯಲ್ಲಿ ವಿಮ್ಸ್ಗೆ (VIMS) ಸ್ಥಳಾಂತರಿಸಲಾಗಿದೆ.
ದರ್ಶನ್ ಇರುವ ವಾರ್ಡ್ ಸುತ್ತ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ನೆಚ್ಚಿನ ನಟನನ್ನು ನೋಡಲು ಅಭಿಮಾನಿಗಳು ಆಸ್ಪತ್ರೆಯ ಬಳಿ ಜಮಾಯಿಸಿದ್ದರು. MRI ಹಾಗೂ CT Scan ಬಳಿಕ ದರ್ಶನ್ರನ್ನು ವಾಪಸ್ ಜೈಲಿಗೆ ಸ್ಥಳಾಂತರಿಸಲಾಗಿದ್ದು, ಅಭಿಮಾನಿಗಳು ಅಂಬುಲೆನ್ಸ್ಅನ್ನು ಹಿಂಬಾಲಿಸುತ್ತ ಜೈ ಡಿ ಬಾಸ್ ಎಂದು ಘೋಷಣೆ ಕೂಗುತ್ತಿದ್ದರು.
ಕಳೆದ ಕೆಲ ದಿನಗಳ ಹಿಂದ ದರ್ಶನ್ ಬೆನ್ನು ನೋವಿನಿಂದ (Darshan BackPain) ಬಳಲುತ್ತಿರುವ ಹಿನ್ನಲೆ ಪತ್ನಿ ವಿಜಯಲಕ್ಷ್ಮೀ ಹಾಗೂ ಸಂಬಂಧಿ ಸುಶಾಂತ್ ನಾಯ್ಡು ದರ್ಶನ್ ಆರೋಗ್ಯ ವಿಚಾರಿಸಲು ಬಟ್ಟೆ, ತಿಂಡಿ ತಿನಿಸುಗಳ ಎರಡು ಬ್ಯಾಗ್ ಗಳನ್ನು ತಂದಿದ್ದರು. ದರ್ಶನ್ ಅವರನ್ನು ಹೈ ಸೆಕ್ಯೂರಿಟಿ ಸೆಲ್ನಿಂದ ಕರೆ ತಂದು ಸಂದರ್ಶಕರ ಕೋಣೆಗೆ ಕಳುಹಿಸಲಾಯಿತು. ಜಾಮೀನು ಅರ್ಜಿ ವಿಚಾರಣೆ, ಆರೋಗ್ಯದ ಬಗ್ಗೆ ಪತ್ನಿ ಜತೆ ಅರ್ಧಗಂಟೆವರೆಗೆ ಚರ್ಚಿಸಿ ಬಳಿಕ ಎರಡು ಬ್ಯಾಗ್ ಗಳನ್ನು ತೆಗೆದುಕೊಂಡು ದರ್ಶನ್ ಸೆಲ್ಗೆ ಹೊರಟರು.