ಜಿಲ್ಲೆ

ಬಳ್ಳಾರಿ ಜೈಲಿನಲ್ಲಿ ನಟ ದರ್ಶನ್​ಗೆ ಇಂದು ಭರ್ಜರಿ ಮಟನ್ ಊಟ!

ರಮೇಶ್​ ಕುಮಾರ್​​ ಬಿ ಎಡಮೋಳೆ

ಬಳ್ಳಾರಿ: ಬಳ್ಳಾರಿಯ ಸೆಂಟ್ರಲ್ ಜೈಲಿನಲ್ಲಿ ಬಂಧಿಯಾಗಿರುವ ದರ್ಶನ್ ಸೇರಿ 385 ಕೈದಿಗಳಿಗೂ ಇಂದು ಮಧ್ಯಾಹ್ನ ಮಟನ್ ಊಟ ಸಿಗಲಿದೆ.

ಜೈಲು ನಿಯಮದ ಪ್ರಕಾರ ವಾರದಲ್ಲಿ ಒಂದು ದಿನ ನಾನ್ ವೆಜ್ ಊಟ ಕೈದಿಗಳಿಗೆ ನೀಡಲಾಗುತ್ತದೆ. ವಾರದಲ್ಲಿನ ಪ್ರತಿ ಶುಕ್ರವಾರ ಮಟನ್, ಚಿಕನ್ ಊಟ ನೀಡಲಾಗುತ್ತದೆ. ಒಂದು ವಾರ ಮಟನ್, ಒಂದು ವಾರ ಚಿಕನ್ ಊಟ ನೀಡಲಾಗುತ್ತದೆ. ಈ ವಾರ ಮಟನ್ ಊಟ ನೀಡಲಾಗುತ್ತಿದ್ದು, 40 ಕೆಜಿ ಮಟನ್​ ಅನ್ನು ಜೈಲಿನೊಳಗೆ ಒಯ್ಯಲಾಗಿದೆ. ಪ್ರತಿ ಕೈದಿಗೆ 115 ಗ್ರಾಂ. ಮಟನ್ ನೀಡಲಾಗುತ್ತಿದ್ದು, ರಾತ್ರಿ ಊಟಕ್ಕೆ ಮಟನ್ ಸಿದ್ಧವಾಗುತ್ತಿದೆ.

ಮಟನ್ ತೂಕ ಮಾಡಲು ಜೈಲಿಗೆ ಮಟನ್ ವ್ಯಾಪರಿ ಖಾಜಹುಸೇನ್ ಆಗಮಿಸಿದ್ದು, ಜೈಲಿನಲ್ಲಿರುವ 385 ಕೈದಿಗಳಿಗೆ ಮಟನ್ ಊಟ ನೀಡಲಾಗುತ್ತದೆ.

ಪುಸ್ತಕ ಮೊರೆ: ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ನಟ ದರ್ಶನ್ ಬಂಧನ ಹಿನ್ನಲೆಯಲ್ಲಿ ಆಧ್ಯಾತ್ಮ ಪುಸ್ತಕಗಳ ಮೊರೆ ಹೋಗಿದ್ದಾರೆ. ಲಲಿತ ಸಹಸ್ರನಾಮ ಶ್ಲೋಕ ಪುಸ್ತಕ ಹಾಗೂ ಆಧ್ಯಾತ್ಮ ಪುಸ್ತಕ ಓದುತ್ತಿದ್ದಾರೆ. ಹೈ ಸೆಕ್ಯುರಿಟಿ ಸೆಲ್​ನಲ್ಲಿ ಒಂಟಿಯಾಗಿರುವ ನಟ ದರ್ಶನ್ ಬೇಸರ ಕಳೆಯಲು ಆಧ್ಯಾತ್ಮ ಪುಸ್ತಕಗಳ ಮೊರೆ ಹೋಗಿದ್ದಾರೆ. ಎರಡು ಬ್ಯಾಗ್​ನಲ್ಲಿ ತಂದಿದ್ದ ಪುಸ್ತಕಗಳನ್ನು ನೀಡಲಾಗಿದೆ.

ಮುಂದುವರಿದ ಭದ್ರತೆ: ನಟ ದರ್ಶನ್ ಬಳ್ಳಾರಿ ಜೈಲ್ ಬಲ್ಲಿ ಬಂಧಿಯಾಗಿರುವ ಕಾರಣ ಸೆಂಟ್ರಲ್ ಜೈಲಿಗೆ ಬಿಗಿ ಭದ್ರತೆ ಇವತ್ತು ‌ಮುಂದುವರಿದಿದೆ. ಜೈಲಿನ ಮುಂಭಾಗದಲ್ಲಿ ಹಾಗೂ ಒಳ ಭಾಗದಲ್ಲಿ ಪೊಲೀಸ್ ನಿಯೋಜನೆ ಮಾಡಲಾಗಿದೆ.