ಜಿಲ್ಲೆ

ಕೆಎಫ್‌ಡಿಸಿ ಬಲಪಡಿಸಲು ಕ್ರಮ- ಸಚಿವ ಮಂಕಾಳ ವೈದ್ಯ ಹೇಳಿಕೆ

ಕಾರವಾರ: ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮ (ಕೆಫ್‌ಡಿಸಿ) ಬಲಪಡಿಸಲು ಅಗತ್ಯ ಕ್ರಮ ವಹಿಸಲಾಗುವುದು ಎಂದು ಮೀನುಗಾರಿಕೆ ಸಚಿವ ಮಂಕಾಳ ವೈದ್ಯ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಅವರು ಮಾತನಾಡಿದರು. ಫಿಶ್ ಮಿಲ್ ಸ್ಥಗಿತ, ಐಸ್ ಪ್ಲಾಂಟ್ ಬಂದ್' ಎಂಬ ಶೀರ್ಷಿಕೆಯಡಿವಿಜಯವಾಣಿ' ಕೆಎಫ್‌ಡಿಸಿ ಆಸ್ತಿಗಳ ದುಸ್ಥಿತಿಯ ಬಗ್ಗೆ ಜು.20 ರಂದು ವಿಸ್ತçತ ವರದಿ ಮಾಡಿತ್ತು. ಆ ಬಗ್ಗೆ ಸಚಿವರು ಪ್ರತಿಕ್ರಿಯೆ ನೀಡಿದರು. 2020 ರಲ್ಲಿ ಕೆಎಫ್‌ಡಿಸಿ 2 ಕೋಟಿಗೂ ಅಽಕ ನಷ್ಟ ಅನುಭವಿಸಿತ್ತು. 2022 ರಲ್ಲಿ 37 ಲಕ್ಷ ನಷ್ಟವಾಗಿತ್ತು. ನಾವು ನಷ್ಟ ಭರ್ತಿ ಮಾಡಲು ಯೋಜನೆ ರೂಪಿಸಿದ್ದೇವೆ. ಈಗ ಇಲ್ಲದ ಕಡೆಯೂ ಡೀಸೆಲ್ ಬಂಕ್ ತೆರೆಯುತ್ತಿದ್ದೇವೆ. ಫಿಶ್ ಮಿಲ್ ಹಾಗೂ ಐಸ್ ಪ್ಲಾಂಟ್‌ಗಳು ಕೆಎಫ್‌ಡಿಸಿ ನಡೆಸಿದರೆ ಅದು ನಷ್ಟವಾಗಲಿದೆ. ಇದರಿಂದ ಖಾಸಗಿಯವರಿಗೆ ನೀಡಲು ಸಿದ್ಧತೆ ನಡೆಸಿದ್ದೇವೆ.ಆದರೆ, ಈ ಎಲ್ಲ ಕಾರ್ಯಗಳಿಗೆ ನಮಗೆ ಸಮಯ ಬೇಕು ಎಂದರು.

ಗ್ರಾಮ ವಾಸ್ತವ್ಯ:

ಪ್ರತಿ ತಿಂಗಳ ಒಂದು ನಿಗದಿತ ದಿನದಂತು ಎಲ್ಲ ತಾಲೂಕುಗಳ ಒಂದು ಗ್ರಾಮಗಳಲ್ಲಿ ಎಲ್ಲ ಅಧಿಕಾರಿಗಳು ತೆರಳಿ ಸಮಸ್ಯೆ ಆಲಿಸುವ ಕಾರ್ಯಕ್ರಮವನ್ನು ಪ್ರಾರಂಭಿಸಲಿದ್ದೇವೆ ಎಂದು ಸಚಿವ ಮಂಕಾಳ ವೈದ್ಯ ತಿಳಿಸಿದರು.

ನಿಗದಿ ಪಡಿಸಿದ ದಿನದಂದು ಬೆಳಗ್ಗೆ 10 ಗಂಟೆಯಿಂದ ಸಾಯಂಕಾಲ 5 ಗಂಟೆಯವರೆಗೆ ಅಲ್ಲಿ ವಾಸ್ತವ್ಯ ಮಾಡಲಿದ್ದೇವೆ. ಜನರ ಸಮಸ್ಯೆ ಆಲಿಸಲು ಶಾಸಕರು ಹಾಗೂ ನಾನೂ ಬರಲಿದ್ದೇವೆ ಎಂದರು.

ಟೋಲ್‌ ಬಂದ್‌ ಮಾಡಲು ವರದಿ

ಜಿಲ್ಲೆಯಲ್ಲಿ ಕಾರವಾರದಿಂದ ಭಟ್ಕಳವರೆಗೆ ಎಲ್ಲೂ ನಿರಂತರವಾಗಿ 10 ಕಿಮೀ ಚತುಷ್ಪಥ ಹೆದ್ದಾರಿ ವಿಸ್ತರಣೆಯಾಗಿಲ್ಲ. ವಾಹನ ಸವಾರರು ಸಾಯುತ್ತಿದ್ದಾರೆ.

ಇದರಿಂದ ಟೋಲ್‌ ಬಂದ್‌ ಮಾಡಬೇಕು ಎಂದು ಹಿಂದೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಯಾವುದೇ ಸ್ಪಂದನೆ ದೊರೆಯಲಿಲ್ಲ. ಇಂದು ಕೆಡಿಪಿ ಸಭೆಯಲ್ಲಿ ಮತ್ತೆ ನಿರ್ಣಯ ಮಾಡಿ ಕೇಂದ್ರ ಸರ್ಕಾರಕ್ಕೆ ಕಳಿಸಲೀದ್ದೇವೆ.

ಕಾರವಾರ-ಬಿಣಗಾ ಸುರಂಗ ಮಾರ್ಗಕ್ಕೆ ನೀಡಿದ ಫಿಟ್‌ನೆಸ್‌ ಸರ್ಟಿಫಿಕೇಟ್‌ ಸರಿಯಾಗಿಲ್ಲ. ಐಆರ್‌ಬಿ ಹಾಗೂ ಎನ್‌ಎಚ್‌ಎಐ ನಡುವೆ ಆದ ಎಗ್ರಿಮೆಂಟ್‌ ಇದುವರೆಗೂ ಒದಗಿಸಿಲ್ಲ.

ಇಷ್ಟು ದಿನ ಅಧಿಕಾರಿಗಳು ಜನಪ್ರತಿನಿಧಿಗಳು ಏನು ಮಾಡಿದರು ಎಂದು ಗೊತ್ತಿಲ್ಲ. ಇನ್ನು ನಾನು ಜನರಿಗೆ ತೊಂದರೆ ಆಗಲು ಬಿಡುವುದಿಲ್ಲ ಎಂದರು.