ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ)ಯಡಿ ಗ್ರಾಮೀಣ ಭಾಗದ ಖಾಸಗಿ ಜಾಗದ ಚರಂಡಿ ಹೂಳೆತ್ತಲು ಅವಕಾಶ ಕಲ್ಪಿಸುವಂತೆ ಸರ್ಕಾರದ ಗಮನ ಸೆಳೆಯುವುದಾಗಿ ಸಾವಾಜಿಕ ಪರಿಶೋಧನೆಯ ತಾಲೂಕು ವ್ಯವಸ್ಥಾಪಕ ರೋಹಿತ್‌ಕುವಾರ್ ಭರವಸೆ ನೀಡಿದರು.
ಪಡುಬಿದ್ರಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಗ್ರಾ.ಪಂ.ನ 2024-25ನೇ ಸಾಲಿನ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ, 15ನೇ ಹಣಕಾಸು ಆಯೋಗದ ಅನುದಾನ ಮತ್ತು ತಾ.ಪಂ., ಜಿ.ಪಂ. ರಾಜ್ಯ ಹಣಕಾಸು ಯೋಜನೆಯ ಸಾವಾಜಿಕ ಪರಿಶೋಧನೆ ವಿಶೇಷ ಗ್ರಾಮಸಭೆಯಲ್ಲಿ ಮಾತನಾಡಿದರು.
ಹೂಳೆತ್ತುವ ಸಮಸ್ಯೆ ಬಗ್ಗೆ ಗ್ರಾ.ಪಂ. ಸದಸ್ಯರಾದ ರವಿ ಶೆಟ್ಟಿ, ಗಣೇಶ್ ಕೋಟ್ಯಾನ್, ನವೀನ್ ಎನ್.ಶೆಟ್ಟಿ, ಹರೀಶ್ ಶೆಟ್ಟಿ ಮತ್ತು ಶೇಖರ್ ವಿಷಯ ಪ್ರಸ್ತಾಪಿಸಿ, ಗ್ರಾಮ ವ್ಯಾಪ್ತಿಯಲ್ಲಿ ಹಲವು ಚರಂಡಿಗಳು ಸರ್ಕಾರಿ ಮತ್ತು ಖಾಸಗಿ ಜಾಗದಲ್ಲಿವೆ. ನರೇಗಾ ಯೋಜನೆಯಡಿ ಸರ್ಕಾರಿ ಜಾಗದ ಚರಂಡಿ ಹೂಳೆತ್ತಲು ಅವಕಾಶವಿದೆ. ಖಾಸಗಿ ಜಾಗದ ಹೂಳೆತ್ತಲು ಯೋಜನೆಯಲ್ಲಿ ಅವಕಾಶವಿಲ್ಲದೆ ಸಮಸ್ಯೆಯಾಗಿದೆ ಎಂದು ದೂರಿದರು.
ಉದ್ಯೋಗ ಖಾತರಿ ಯೋಜನೆ 150 ದಿನಕ್ಕೆ ವಿಸ್ತರಿಸಬೇಕು. ಜತೆಗೆ ಪೌಷ್ಟಿಕ ಆಹಾರ ಒದಗಿಸಬೇಕು. ಮೀನುಗಾರಿಕೆ ಮತ್ತು ಕೃಷಿ ಕಾಯಕಗಳನ್ನೂ ಉದ್ಯೋಗ ಖಾತರಿಗೆ ಒಳಪಡಿಸುವಂತೆ ರವಿ ಶೆಟ್ಟಿ ಆಗ್ರಹಿಸಿದರು. ಈ ಬಗ್ಗೆ ಮೇಲಧಿಕಾರಿಗಳ ಗಮನ ಸೆಳೆಯಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಯಲ್ಲಮ್ಮ ತಿಳಿಸಿದರು.
ಗ್ರಾಪಂ ಅಧ್ಯಕ್ಷೆ ಶಶಿಕಲಾ ವೈ., ಉಪಾಧ್ಯಕ್ಷ ಹೇಮಚಂದ್ರ ಸಾಲ್ಯಾನ್, ಪಿಡಿಒ ಮಂಜುನಾಥ ಶೆಟ್ಟಿ, ಕಾರ್ಯದರ್ಶಿ ರೂಪಲತಾ, ಸವಾಜ ಕಲ್ಯಾಣ ಇಲಾಖೆ ಬಸವರಾಜ್, ನರೇಗಾ ಅಧಿಕಾರಿ ಶಂಕರ್ ಉಪಸ್ಥಿತರಿದ್ದರು.
ನರೇಗಾ ಯೋನೆಯಡಿ 96 ವೈಯಕ್ತಿಕ ಮತ್ತು 6 ಸಮುದಾಯ ಕಾಮಗಾರಿ ನಡೆಸಲಾಗಿದೆ. ಒಟ್ಟು 46.03 ಲಕ್ಷ ರೂ. ವಿನಿಯೋಗಿಸಲಾಗಿದೆ. 420 ಸಕ್ರಿಯ ಉದ್ಯೋಗ ಖಾತರಿಗಳಿವೆ. 15ನೇ ಹಣಕಾಸು ಯೋಜನೆಯಡಿ 72.56 ಲಕ್ಷ ರೂ. ವೆಚ್ಚದ 42 ಕಾಮಗಾರಿಗಳನ್ನು ನಿರ್ವಹಿಸಲಾಗಿದೆ. ಇದರಲ್ಲಿ 36 ಕಾಮಗಾರಿ ಮತ್ತು 6 ಚಟುವಟಿಕೆಗಳು ಒಳಗೊಂಡಿವೆ. ರಾಜ್ಯ ಹಣಕಾಸು ಆಯೋಗದ ಕಳೆದ 10 ವರ್ಷಗಳಲ್ಲಿ ತಾಪಂ ಅನುದಾನ 1.05 ಕೋಟಿ ರೂ. ಮತ್ತು ಜಿಪಂ ಅನುದಾನ 44.30 ಲಕ್ಷ ರೂ. ವೆಚ್ಚದ ಕಾಮಗಾರಿಗಳನ್ನು ನಿರ್ವಹಿಸಲಾಗಿದೆ ಎಂದು ರೋಹಿತ್ ವಾಹಿತಿ ನೀಡಿದರು. ತಾಲೂಕಿನಲ್ಲಿಯೇ ಅತೀ ಹೆಚ್ಚು 102 ನರೇಗಾ ಕಾಮಗಾರಿ ನಿರ್ವಹಿಸಿದ ಪಡುಬಿದ್ರಿ ಗ್ರಾಪಂನ್ನು ಅಭಿನಂದಿಸಲಾಯಿತು.