ಜಿಲ್ಲೆ

ದೇಶಾದ್ಯಂತ ಎಕರೆಗಟ್ಟಲೆ ಭೂಮಿ ಅನಾಥ: ಸಾಹಿತಿ ಮುಶ್ತಾಕ್ ಹೇಳಿಕೆ

ಉಳ್ಳಾಲ: ದೇಶದಲ್ಲಿ 33 ಲಕ್ಷ ಎಕರೆ ಭೂಮಿ ವಕ್ಫ್‌ನಲ್ಲಿದ್ದರೂ 9.25 ಎಕರೆ ಲಕ್ಷ ಭೂಮಿ ಮಾತ್ರ ವಕ್ಫ್‌ಗೆ ದಾಖಲೀಕರಣ ಆಗಿದೆ. ಇದರಿಂದಾಗಿ ಲಕ್ಷಾಂತರ ಭೂಮಿ ಅನಾಥವಾಗಿದೆ ಎಂದು ಸಾಹಿತಿ ಮುಶ್ತಾಕ್ ಹೆನ್ನಾಬೈಲ್ ಹೇಳಿದರು.

ಅಸಂವಿಧಾನಿಕ ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ 407 ಉಚ್ಚಿಲ ಜುಮಾ ಮಸೀದಿ ವತಿಯಿಂದ ಶುಕ್ರವಾರ ಮಸೀದಿ ವಠಾರದಲ್ಲಿ ಆಯೋಜಿಸಲಾಗಿದ್ದ ಖಂಡನಾ ಭಾಷಣ ಮತ್ತು ವಕ್ಫ್ ಕಾಯ್ದೆ ಅರಿವು ಮತ್ತು ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದರು

ವಕ್ಫ್‌ನಿಂದ 12 ಸಾವಿರ 12 ಕೋಟಿ ವಾರ್ಷಿಕ ಆದಾಯ ಇರಬೇಕಿತ್ತಾದರೂ ಈಗಿರುವುದು ಕೇವಲ 1,500 ಕೋಟಿ ಮಾತ್ರ. ವಕ್ಫ್ ಭೂಮಿ ಮುಸಲ್ಮಾನರು ಸಮರ್ಪಕವಾಗಿ ಬಳಸಿದ್ದೇ ಆದಲ್ಲಿ ಜಾಗತಿಕವಾಗಿ ಶ್ರೀಮಂತರಾಗುತ್ತಾರೆ ಎಂದು ಜಸ್ಟೀಸ್ ಸಾಚಾರ್ ಸಮಿತಿ ವರದಿ ನೀಡಿದೆ ಎಂದರು.

ಉಚ್ಚಿಲ ಜುಮಾ ಮಸೀದಿಯ ಮುದರ್ರಿಸ್ ಇಬ್ರಾಹಿಂ ಫೈಝಿ ದುವಾ ನೆರವೇರಿಸಿದರು. ಮಸೀದಿ ಅಧ್ಯಕ್ಷ ಇಸ್ಮಾಯಿಲ್ ಕೊಪ್ಪಳ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಅಬ್ಬಾಸ್ ಯು.ಎಂ., ಸಮಿತಿ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ಸಹಾಯಕ ಖತೀಬ್ ಮೌಲಾನ ಜಾಫರ್ ಸಖಾಫಿ ಪ್ರಸ್ತಾವನೆಗೈದರು. ಕೋಶಾಧಿಕಾರಿ ಹಸೈನಾರ್ ವಂದಿಸಿದರು. ಮಾಜಿ ಕಾರ್ಯದರ್ಶಿ ಸಲಾಂ ಉಚ್ಚಿಲ್ ನಿರೂಪಿಸಿದರು.

ವಕ್ಫ್ ಸೊತ್ತು ಸರ್ಕಾರದಿಂದ ಕಬಳಿಸಿದ್ದಲ್ಲ, ಯಾರ ಔದಾರ್ಯವೂ ಅಲ್ಲ. ಇದು ಮುಸ್ಲಿಂ ದಾನಿಗಳು ನೀಡಿದ ಸೊತ್ತಾಗಿದೆ. ಭಾರತದಲ್ಲಿ ಪ್ರತಿಯೊಂದು ಧರ್ಮೀಯರಿಗೂ ಜೀವಿಸುವ ಹಕ್ಕಿದ್ದು ಸರ್ಕಾರ ಸೊತ್ತುಗಳನ್ನು ರಕ್ಷಿಸಬೇಕೇ ಹೊರತು ಕಸಿಯಲು ಮುಂದಾಗಬಾರದು. ಮೌಲಾನ ಜಾಫರ್ ಸಖಾಫಿ, ಸಹಾಯಕ ಖತೀಬ್, ಉಚ್ಚಿಲ ಜುಮಾ ಮಸೀದಿ