ಜಿಲ್ಲೆ

ಪ್ರತಿಭೆಗೆ ಪ್ರೋತ್ಸಾಹ ಸಿಕ್ಕಾಗ ಸಾಧನೆ ಸಾಧ್ಯ

ಇಂದಿರಾ ಎನ್ ಕೆ

ಕೋಟ: ಡಾ.ಶಿವರಾಮ ಕಾರಂತರ ಹೆಸರಿನ ಪ್ರಶಸ್ತಿ ಶ್ರೇಷ್ಠವಾದುದು. ಅವರ ಹೆಸರಿನಲ್ಲಿ ಪ್ರಶಸ್ತಿ ಸ್ವೀಕರಿಸಿದ ಎಲ್ಲ ಶಿಕ್ಷಕರು ಅಭಿನಂದನಾರ್ಹರು. ಶಿಕ್ಷಕರು ವಿದ್ಯಾರ್ಥಿಗಳ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಿದಾಗ ವಿದ್ಯಾರ್ಥಿಗಳು ಸಾಧನೆ ಮಾಡಲು ಸಾಧ್ಯ ಎಂದು ಉಡುಪಿ ಸರ್ಕಾರಿ ಶಿಕ್ಷಣ ಮತ್ತು ಶಿಕ್ಷಕರ ತರಬೇತಿ ಸಂಸ್ಥೆ ಪ್ರಾಂಶುಪಾಲ ಡಾ.ಅಶೋಕ್ ಕಾಮತ್ ಹೇಳಿದರು. ಕೋಟ ಕಾರಂತ ಥೀಂ ಪಾರ್ಕ್‌ನಲ್ಲಿ ಕಾರಂತ ಪ್ರತಿಷ್ಠಾನ, ಕೋಟತಟ್ಟು ಗ್ರಾಪಂ ಉಡುಪಿ ಹಾಜಿ ಅಬ್ದುಲ್ಲ ಸಾಹೇಬ್ ಮೆಮೋರಿಯಲ್ ಚಾರಿಟೆಬಲ್ ಟ್ರಸ್ಟ್, ಇನ್ನಿತರ ಸಂಘ ಸಂಸ್ಥೆ ಆಶ್ರಯದಲ್ಲಿ ಇತ್ತೀಚೆಗೆ ಕೋಟ ಶಿವರಾಮ ಕಾರಂತ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು. ಕಾರಂತ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ ಸಿ.ಕುಂದರ್ ಉದ್ಘಾಟಿಸಿ ಮಾತನಾಡಿದರು. ಕೋಟತಟ್ಟು ಗ್ರಾಪಂ ಸದಸ್ಯ ವಾಸು ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಹಾಜಿ ಅಬ್ದುಲ್ಲ ಸಾಹೇಬ್ ಮೆಮೋರಿಯಲ್ ಚಾರಿಟೆಬಲ್ ಟ್ರಸ್ಟ್‌ನ ಉಪಾಧ್ಯಕ್ಷ ಸೈಯದ್ ಸಿರಾಜ್ ಅಹಮ್ಮದ್, ಕೋಟತಟ್ಟು ಗ್ರಾಪಂ ಸದಸ್ಯೆ ಸಾಹಿರಾ ಬಾನು, ಕಾರಂತ ಪ್ರತಿಷ್ಠಾನದ ಟ್ರಸ್ಟಿ ಸುಬ್ರಾಯ ಆಚಾರ್ಯ ಉಪಸ್ಥಿತರಿದ್ದರು. ಕಾರಂತ ಪ್ರತಿಷ್ಠಾನದ ಕಾರ್ಯದರ್ಶಿ ಕೋಟ ನರೇಂದ್ರ ಕುಮಾರ್ ಸ್ವಾಗತಿಸಿ. ಶಿಕ್ಷಕ ಸತೀಶ್ ವಡ್ಡರ್ಸೆ ನಿರೂಪಿಸಿ, ಕೋಟತಟ್ಟು ಗ್ರಾಪಂ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್ ವಂದಿಸಿದರು.

ಪ್ರಶಸ್ತಿ ಪುರಸ್ಕೃತರು

ಪ್ರಾಥಮಿಕ ಶಾಲಾ ವಿಭಾಗದಲ್ಲಿ ಸಿದ್ದಾಪುರ ಶಾಲೆ ಶ್ರೀಧರ ಎಸ್.ಐತಾಳ, ಮೆಟ್ಟಿನಹೊಳೆ ಶಾಲೆ ರಾಜೀವ ಶೆಟ್ಟಿ ಎಂ., ನೂಲಿಗ್ಗೇರಿ ಶಾಲೆ ರೇಖಾ ಪ್ರಭಾಕರ್, ತಗ್ಗರ್ಸೆ ಶಾಲೆ ಸಾರಿಕಾ, ಹೇರೂರು ಶಾಲೆ ಮಂಜುಳಾ ಜಯಕರ, ಬ್ರಹ್ಮಾವರ ಎಸ್‌ಎಂಎಸ್ ಶಾಲೆ ಶೈಲಾ ಜಾಯ್ಸ ಲೂಯಿಸ್, ಗಂಟುಬೀಳು ಬೆಳ್ವೆ ಶಾಲೆ ಶಾರದಾ, ಕೆರ್ವಾಶೆ ಮೈನ್ ಹಿ.ಪ್ರಾ. ಶಾಲೆ ಕೃಷ್ಣ ನಾಯ್ಕ, ಹುಂಚಾರುಬೆಟ್ಟು ಶಾಲೆ ಶಂಕರ ಪೂಜಾರಿ, ಅರಳಿಕಟ್ಟೆ ಶಾಲೆ ಕಿರಣ್‌ರಾಮ್ ಚಿಲ್ಲೂರ ಬಡ್ನಿ, ಕಾಸಾಡಿ ಶಾಲೆ ಉಷಾ ಹೆಬ್ಬಾರ್, ದುಡ್ಡಿನಗುಳಿ ಬೈಂದೂರು ಶಾಲೆ ಸವಿತಾ ಬಿಲ್ಲವ ಪ್ರಶಸ್ತಿ ಸ್ವೀಕರಿಸಿದರು.ಪ್ರೌಢಶಾಲಾ ವಿಭಾಗದಲ್ಲಿ ನಾಲ್ಕೂರು ಪ್ರೌಢಶಾಲೆ ಕೃಷ್ಣ ನಾಯ್ಕ ಕೆ., ಬೀಜಾಡಿ ಸೀತಾಲಕ್ಷ್ಮೀ ರಾಮಕೃಷ್ಣ ಹತ್ವಾರ್ ಪ್ರೌಢಶಾಲೆ ಅರ್ಪಣಾ ಬಾಯಿ ಕೆ., ಅಮಾಸೆಬೈಲು ಡ್ಯೂಯಲ್ ಸ್ಟಾರ್ ಆಂಗ್ಲಮಾಧ್ಯಮ ಶಾಲೆ ವಿಘ್ನೇಶ್ ಜಿ.ಎಲ್., ನುಕ್ಕೂರು ಪ್ರೌಢಶಾಲೆ ಸತೀಶ್ ಜಿ., ಮಣೂರು ಪಡುಕರೆ ಪಪೂ ಕಾಲೇಜು ಪ್ರೌಢಶಾಲಾ ವಿಭಾಗ ರಾಮದಾಸ್ ಬಿ.ನಾಯಕ್., ಶಿರ್ಲಾಲು ಪಪೂ ಕಾಲೇಜು ಪ್ರೌಢಶಾಲಾ ವಿಭಾಗದ ನಾರಾಯಣ ಪೂಜಾರಿ, ಮಣಿಪಾಲ ಮಾಧವ ಕೃಪ ಶಾಲೆ ಎನ್.ಶಕುಂತಳಾ ಪರ್ಕಳ, ಕಮಲಶಿಲೆ ಬ್ರಾಹ್ಮಿ ದುರ್ಗಾಪರಮೇಶ್ವರಿ ಪ್ರೌಢಶಾಲೆಯ ಸುರೇಂದ್ರ ಶೆಟ್ಟಿ ಪ್ರಶಸ್ತಿ ಸ್ವೀಕರಿಸಿದರು.