ದೇವದುರ್ಗ ಕೆಬಿಜೆಎನ್‌ಎಲ್ ಎಇಇ ಅನಿಲ್‌ರಾಜ್‌ಗೆ ತಾಲೂಕು ಗುತ್ತಿಗೆದಾರರ ಒಕ್ಕೂಟ ಮನವಿ ಸಲ್ಲಿಸಿತು. ತಾಲೂಕು ಅಧ್ಯಕ್ಷ ಮಹಾದೇವಪ್ಪಗೌಡ ಚಿಕ್ಕಬೂದೂರು, ಪ್ರಧಾನ ಕಾರ್ಯದರ್ಶಿ ಮಹೇಶ ಅಕ್ಕರಕಿ, ಉಪಾಧ್ಯಕ್ಷ ಮಹಮ್ಮದ್ ಅಸ್ಲಾಂ, ಮೌಲಾಸಾಬ್ ಜಾಲಹಳ್ಳಿ, ಸಿದ್ಧರಾಮಪ್ಪ ಸಡಕಲಗುಡ್ಡ ಇದ್ದರು. 
ಜಿಲ್ಲೆ

ನಿಯಮಾನುಸಾರವಾಗಿ ಟೆಂಡರ್ ನೀಡಿ

ದೇವದುರ್ಗ: ನಾರಾಯಣಪುರ ಬಲದಂಡೆ ನಾಲೆ ಉಪಕಾಲವೆಗಳ ವಿಶೇಷ ದುರಸ್ತಿ ಹಾಗೂ ಕ್ಲೋಸರ್ ಕಾಮಗಾರಿಯಲ್ಲಿ ಪ್ಯಾಕೇಜ್ ಗುತ್ತಿಗೆ ರದ್ದು ಮಾಡಿ ನಿಯಮಾನುಸಾರವಾಗಿ ಟೆಂಡರ್ ನೀಡುವಂತೆ ಒತ್ತಾಯಿಸಿ ತಾಲೂಕಿನ ಚಿಕ್ಕಹೊನ್ನಕುಣಿಯಲ್ಲಿ ಕೆಬಿಜೆಎಲ್‌ಎಲ್ ಎಇಇ ಅನಿಲ್‌ರಾಜ್‌ಗೆ ದೇವದುರ್ಗ ತಾಲೂಕು ಗುತ್ತಿಗೆದಾರರ ಒಕ್ಕೂಟ ಮಂಗಳವಾರ ಮನವಿ ಸಲ್ಲಿಸಿತು.

2024-25ನೇ ಸಾಲಿನಲ್ಲಿ ನಾರಾಯಣಪುರ ಬಲದಂಡೆ ಉಪಕಾಲುವೆಗಳ ವಿಶೇಷ ರಿಪೇರಿ ಹಾಗೂ ಕ್ಲೋಸಿಂಗ್ ಕಾಮಗಾರಿಗೆ ಅನುದಾನ ಬಿಡುಗಡೆಯಾಗಿದೆ. ಸದರಿ ಕಾಮಗಾರಿಯನ್ನು ಪ್ಯಾಕೇಜ್ ಗುತ್ತಿಗೆ ನೀಡಿದರೆ ಗುತ್ತಿಗೆದಾರರಿಗೆ ಸಮಸ್ಯೆಯಾಗಲಿದೆ. ನಾಲ್ಕೈದು ವರ್ಷಗಳಿಂದ ಕೆಲಸವಿಲ್ಲದೆ ಗುತ್ತಿಗೆದಾರರು ಜೀವನ ನಡೆಸಲು ಸಂಕಷ್ಟ ಎದುರಿಸುತ್ತಿದ್ದಾರೆ ಎಂದರು.

ಪ್ಯಾಕೇಜ್ ಗುತ್ತಿಗೆ ನೀಡಿದರೆ ದೊಡ್ಡವರಿಗೆ ಅನುಕೂಲವಾಗಲಿದ್ದು, ಸಣ್ಣ ಕಾಂಟ್ರಾಕ್ಟರ್‌ಗೆ ಕೆಲಸವಿಲ್ಲದಂತಾಗುತ್ತದೆ ಎಂದು ದೂರಿದರು. ಕೂಡಲೇ ಎರಡೂ ಕಾಮಗಾರಿಗಳ ಟೆಂಡರ್ ಅನ್ನು ಪ್ಯಾಕೇಜ್‌ನಲ್ಲಿ ನೀಡದೆ, ನಿಯಮಾನುಸಾರವಾಗಿ ಟೆಂಡರ್ ಕರೆಯಬೇಕು. 1ರಿಂದ 4ನೇ ದರ್ಜೆ ಗುತ್ತಿಗೆದಾರರಿಗೆ ಅನುಕೂಲವಾಗುವಂತೆ ಕಾಮಗಾರಿ ನೀಡಬೇಕು ಎಂದು ಒತ್ತಾಯಿಸಿದರು.