ಹಗರಿಬೊಮ್ಮನಹಳ್ಳಿ: ಪೌರ ಕಾರ್ಮಿಕರನ್ನು ಗೌರವದಿಂದ ಕಾಣಬೇಕು ಎಂದು ಶಾಸಕ ಕೆ.ನೇಮಿರಾಜ ನಾಯ್ಕ ಹೇಳಿದರು. ಪಟ್ಟಣದ ಕನ್ನಕಾಪರಮೇಶ್ವರಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ, ಪೌರ ಕಾರ್ಮಿಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಪರಿಸರವನ್ನು ಸ್ವಚ್ಛವಾಗಿಡುವ ಪೌರಕಾರ್ಮಿಕರಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಸರ್ಕಾರಗಳು ಮುಂದಾಗಬೇಕು. ವಸತಿ, ನಿವೇಶನ ನೀಡಲು ಯೋಜನೆ ರೂಪಿಸಬೇಕು ಎಂದರು.
ಇದನ್ನು ಓದಿ: ವಿವಿಧ ಯೋಜನೆಗಳ ಸಾಧನೆ ಶೂನ್ಯ
ಪುರಸಭೆ ಅಧ್ಯಕ್ಷ ಮರಿರಾಮಪ್ಪ ಮಾತನಾಡಿ, ಪೌರಕಾರ್ಮಿಕರ ಕಾರ್ಯಶ್ಲಾಘನೀಯ. ನಿತ್ಯ ಬೆಳಗಿನ ವೇಳೆ ನಗರವನ್ನು ಸ್ವಚ್ಛವಾಗಿಡುವಲ್ಲಿ ಅವರ ಶ್ರಮ ಅಪಾರ ಎಂದರು.
ಹಾಲಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ಬಸವಣ್ಣನವರ ವಚನಗಳಂತೆ ಪೌರ ಕಾರ್ಮಿಕರು ನಿತ್ಯ ತಮ್ಮ ಕರ್ತವ್ಯ ಮಾಡುವ ಮೂಲಕ ಕಾಯಕವನ್ನು ಮೈಗೂಡಿಸಿಕೊಂಡಿದ್ದಾರೆ ಎಂದರು.
ಪುರಸಭೆನಿಂದ ಪೌರ ಕಾರ್ಮಿಕರಿಗೆ ಸಮವಸ ವಿತರಣೆ ಮಾಡಲಾಯಿತು. ಸದಸ್ಯರಾದ ಜನ್ನು ನಾಗರಾಜ, ಅಜೀಜುಲ್ಲಾ, ಬಣಕಾರ ಸುರೇಶ, ಕೆ,ರೇಷ್ಮಾ, ಪ್ರಮುಖರಾದ ಕೊಟ್ರೇಶ ತ್ಯಾವಣಿಗಿ, ಡಿಶ್ ಬಾಳಪ್ಪ, ಕೃಷ್ಣಪ್ಪ, ಎಚ್.ಎಂ.ವಿಜಯಕುಮಾರ್, ಅಂಬಳಿ ರವೀಂದ್ರ, ಅಲ್ಲಾಭಕ್ಷಿ, ಮುಖ್ಯಾಧಿಕಾರಿ ಎಂ.ಪ್ರಭಾಕರ ಪಾಟೀಲ್ ಇತರರಿದ್ದರು.