ಜಿಲ್ಲೆ

ಸೇತುವೆ ಕಾಮಗಾರಿ ವೇಳೆ ಅವಘಡ; ಬ್ಲಾಕ್​ ಕುಸಿದು 9 ಕಾರ್ಮಿಕರಿಗೆ ಗಾಯ

Webdesk - Ravikanth

ಕಲಬುರಗಿ: ಕಾಮಗಾರಿ ವೇಳೆಯೇ ನಡೆಯುವ ದುರಂತಗಳ ಪಟ್ಟಿಗೆ ಮತ್ತೊಂದು ಅವಘಡ ಸೇರಿದ್ದು, ನಿರ್ಮಾಣ ಹಂತದ ಸೇತುವೆಯೊಂದರ ಬ್ಲಾಕ್​ ಕುಸಿದು ಒಂಬತ್ತು ಕಾರ್ಮಿಕರು ಗಾಯಗೊಂಡಿದ್ದಾರೆ. ಕಲಬುರಗಿ ಜಿಲ್ಲೆ ಚಿಂಚೋಳಿ ಪಟ್ಟಣದ ಹೊರವಲಯದಲ್ಲಿ ಈ ಅವಘಡ ಸಂಭವಿಸಿದೆ.

ಇಲ್ಲಿನ ಮುಲ್ಲಾಮಾರಿ ನದಿಗೆ ಅಡ್ಡಲಾಗಿ ಸೇತುವೆಯೊಂದು ನಿರ್ಮಾಣವಾಗುತ್ತಿದ್ದು, ಕಾಮಗಾರಿ ಸಂದರ್ಭದಲ್ಲೇ ಬ್ಲಾಕ್​ ಒಂದು ಕುಸಿದಿದೆ. ಪರಿಣಾಮವಾಗಿ ಕಾಮಗಾರಿಯಲ್ಲಿ ತೊಡಗಿದ್ದ ಒಂಬತ್ತು ಕಾರ್ಮಿಕರು ಗಾಯಗೊಂಡಿದ್ದಾರೆ.

ಗಾಯಗೊಂಡವರಲ್ಲಿ ಕಲಬುರಗಿ ಜಿಲ್ಲೆಯವರಲ್ಲದೆ ಬಿಹಾರ ಮೂಲದ ಕಾರ್ಮಿಕರು ಕೂಡ ಇದ್ದಾರೆ. ಗಾಯಾಗಳುಗಳನ್ನು ತಾಲೂಕು ಹಾಗೂ ಜಿಲ್ಲಾಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.