ಜಿಲ್ಲೆ

ಕಾರು ಗುದ್ದಿ ಉದ್ಯಮಿಗೆ ಗಾಯ

ಸೌಮ್ಯ ಆರ್

ಸುಳ್ಯ: ರಸ್ತೆ ದಾಟುತ್ತಿದ್ದ ಸಂದರ್ಭ ಬಂದ ಕಾರೊಂದು ಗುದ್ದಿದ ಪರಿಣಾಮ ಸುಳ್ಯದ ಉದ್ಯಮಿ ಚಂದ್ರಶೇಖರ ನಂಜೆ ಎಂಬುವರು ಗಾಯಗೊಂಡಿದ್ದಾರೆ. ಡಿ.10ರಂದು ರಾತ್ರಿ ಚಂದ್ರಶೇಖರ ನಂಜೆ ಬೆಂಗಳೂರಿಗೆ ತೆರಳಲು ಸುಳ್ಯ ಬಸ್ ನಿಲ್ದಾಣಕ್ಕೆ ಬರುತಿದ್ದರು. ಸುಳ್ಯದ ಪೆಟ್ರೋಲ್ ಪಂಪ್ ಕಡೆಯಿಂದ ಖಾಸಗಿ ಬಸ್ ನಿಲ್ದಾಣದ ಕಡೆಗೆ ರಸ್ತೆ ದಾಟುತ್ತಿರುವ ಸಂದರ್ಭ ಆ ರಸ್ತೆಯಾಗಿ ಬಂದ ಕಾರು ನಂಜೆ ಅವರಿಗೆ ಗುದ್ದಿದೆ. ಪರಿಣಾಮ ಅವರು ರಸ್ತೆಗೆ ಬಿದ್ದಿದ್ದು ಸಣ್ಣಪುಟ್ಟ ಗಾಯಗಳಾಗಿವೆ. ಸುಳ್ಯದ ಆಸ್ಪತ್ರೆಗೆ ಕರೆತಂದು ಬಳಿಕ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.