ಹೆಬ್ರಿ: ಒಬ್ಬ ಕೈಗಾರಿಕೋದ್ಯಮಿ ಕೃಷಿ ಉಳಿಸುವ ನಿಟ್ಟಿನಲ್ಲಿ ಆಧುನಿಕತೆ ಬೆಳೆಸಿಕೊಂಡು ಕೆಲಸ ಮಾಡುತ್ತಿರುವುದು ಸಮಾಜಕ್ಕೆ ಮಾದರಿ. ವಿದ್ಯಾರ್ಥಿಗಳು ಇಲ್ಲಿರುವ ಉತ್ತಮ ಅಂಶಗಳನ್ನು ಭವಿಷ್ಯದಲ್ಲಿ ಬಳಸಿಕೊಳ್ಳಿ ಎಂದು ಉಪನ್ಯಾಸಕ ರಾಜೇಶ್ ಹೇಳಿದರು.
ಹೆಬ್ರಿ ಮುನಿಯಾಲು ಸಮೀಪದ ಗೋಧಾಮಕ್ಕೆ ತುಮಕೂರು ವಿಶ್ವವಿದ್ಯಾಲಯ ಕಲಾ ಕಾಲೇಜಿನ ವ್ಯವಹಾರ ಆಡಳಿತ ವಿಭಾಗದ ವಿದ್ಯಾರ್ಥಿಗಳು ಇತ್ತೀಚೆಗೆ ಶೈಕ್ಷಣಿಕ ಕೈಗಾರಿಕಾ ಭೇಟಿ ನೀಡಿದ ಸಂದರ್ಭ ಮಾತನಾಡಿದರು.
ಗೋಧಾಮದ ಸಂಸ್ಥಾಪಕ ಡಾ.ರಾಮಕೃಷ್ಣ ಆಚಾರ್, ಉಪನ್ಯಾಸಕರಾದ ಅರುಣ್ ಕುಮಾರ್ ಕೆ., ಮಂಜುಳಾದೇವಿ, ವಿದ್ಯಾರ್ಥಿಗಳು, ಸಿಬ್ಬಂದಿ ಇದ್ದರು.