ಬೈಂದೂರು: ಇಂಜಿನಿಯರ್ಸ್ ಡೇ ಹಿನ್ನೆಲೆಯಲ್ಲಿ ಕತಾರ್‌ನ ಭಾರತೀಯ ಸಮುದಾಯ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತೀಯ ರಾಯಭಾರಿ ವಿಪುಲ್ ನೇತೃತ್ವದಲ್ಲಿ ಭಾರತೀಯ ಸಾಂಸ್ಕೃತಿಕ ಕೇಂದ್ರ, ಕರ್ನಾಟಕ ಸಂಘ ಕತಾರ್ ಆಡಳಿತ ಸಮಿತಿಯ ಸದಸ್ಯರ ವತಿಯಿಂದ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರಿಗೆ ಅಭಿಯಂತರಶ್ರೀ ಪ್ರಶಸ್ತಿ ಪ್ರದಾನಿಸಲಾಯಿತು.
ಸುಬ್ರಮಣ್ಯ ಹೆಬ್ಬಾಗಿಲು ಮೂಲತಃ ಬೈಂದೂರು ನಿವಾಸಿ. 2007ರಲ್ಲಿ ಕತಾರಿನ ಗಲ್ಫಾರ್ ಅಲ್ ಮಿಸ್‌ನಾದ್ ಇಂಜಿನಿಯರಿಂಗ್ ಹಾಗೂ ಕಾಂಟ್ರಾಕ್ಟ್ ಸಂಸ್ಥೆಯಲ್ಲಿ ಉದ್ಯೋಗಕ್ಕೆ ಸೇರ್ಪಡೆಗೊಂಡರು. ಪ್ರಸ್ತುತ ಇವರು 2ನೇ ಬಾರಿ ಭಾರತೀಯ ದೂತಾವಾಸದ ಅಧೀನದಲ್ಲಿರುವ ಭಾರತೀಯ ಸಾಂಸ್ಕೃತಿಕ ಕೇಂದ್ರದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.