ಜಿಲ್ಲೆ

ದೇಲಂಪಾಡಿಯಲ್ಲಿ ಎಬಿಸಿಡಿ ಯೋಜನೆ ಪೂರ್ಣ

ಸೌಮ್ಯ ಆರ್

ಮುಳ್ಳೇರಿಯ: ದೇಲಂಪಾಡಿ ಗ್ರಾಮ ಪಂಚಾಯಿತಿ ಮತ್ತು ಜಿಲ್ಲಾ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಇಲಾಖೆ ಆಯೋಜಿಸಿದ್ದ ಎಬಿಸಿಡಿ ಶಿಬಿರ ಯೋಜನೆಯ ಪೂರ್ಣಗೊಂಡ ಬಗ್ಗೆ ಶಾಸಕ ಸಿ.ಎಚ್.ಕುಂಞಂಬು ೋಷಿಸಿದರು. ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ಎ.ಪಿ.ಉಷಾ ಅಧ್ಯಕ್ಷತೆ ವಹಿಸಿದ್ದರು. ಅಕ್ಷಯ ನೌಕರರು ಮತ್ತು ಪರಿಶಿಷ್ಟ ಪಂಗಡದ ಕಾರ್ಯಕರ್ತರನ್ನು ಸನ್ಮಾನಿಸಲಾಯಿತು.

ಗ್ರಾಪಂ ಉಪಾಧ್ಯಕ್ಷ ಡಿ.ಎ.ಅಬ್ದುಲ್ಲ ಕುಂಞ್ಞೆ, ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರಿಯಾ ಹರೀಶ್, ಕಲ್ಯಾಣ ಸ್ಥಾಯಿ ಸಮಿತಿ ಅಧ್ಯಕ್ಷ ಎ.ಸುರೇಂದ್ರನ್, ಪಂಚಾಯಿತಿ ಯೋಜನಾ ಸಮಿತಿ ಉಪಾಧ್ಯಕ್ಷ ಎ.ಚಂದ್ರಶೇಖರನ್, ಬ್ಲಾಕ್ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸಿ.ಕೆ.ಕುಮಾರನ್, ಬುಡಕಟ್ಟು ವಿಸ್ತರಣಾಧಿಕಾರಿ ವೀರೇಂದ್ರ ಕುಮಾರ್, ಅಕ್ಷಯ ಬ್ಲಾಕ್ ಸಂಯೋಜಕಿ ಪುಷ್ಪಾ, ಪಂಚಾಯಿತಿ ಸದಸ್ಯರಾದ ರಾಧಾಕೃಷ್ಣನ್, ವೆಂಕಟರಮಣ, ದಾಮೋದರನ್, ಪ್ರಮೀಳಾ ಸಿ.ನಾಯಕ್, ರಾಜು ಕೋರಿಕಂಡ ಮೊದಲಾದವರಿದ್ದರು.

ಸಹಾಯಕ ಪರಿಶಿಷ್ಟ ಪಂಗಡ ಅಭಿವೃದ್ಧಿ ಅಧಿಕಾರಿ ಕೆ.ವಿ.ರಾವನ್ ಸ್ವಾಗತಿಸಿದರು. ಪರಿಶಿಷ್ಟ ಪಂಗಡದ ಕಾರ್ಯಕರ್ತ ಚಂದ್ರಶೇಖರ ವಂದಿಸಿದರು.