ಜಿಲ್ಲೆ

ನೇತ್ರಾವತಿ ಸಂಜೀವಿನಿ ಒಕ್ಕೂಟ ಆಟಿಕೂಟ

ಸೌಮ್ಯ ಆರ್

ಬೆಳ್ತಂಗಡಿ: ಕೌಶಲ ಅಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಮಂಗಳೂರು ದಕ್ಷಿಣ ಕನ್ನಡ ಜಿಪಂ, ಬೆಳ್ತಂಗಡಿ ತಾಪಂ ನೇತ್ರಾವತಿ ಸಂಜೀವಿನಿ ತಾಲೂಕುಮಟ್ಟದ ಒಕ್ಕೂಟ ನೇತೃತ್ವದಲ್ಲಿ ಆಟಿದ ಕೂಟ ತಾಪಂ ಸಭಾಂಗಣದಲ್ಲಿ ಗುರುವಾರ ನಡೆಯಿತು.

ತಾಪಂ ಕಾರ್ಯನಿರ್ವಾಹಣಾಧಿಕಾರಿ ಭವಾನಿ ಶಂಕರ್ ಎನ್. ಉದ್ಘಾಟಿಸಿದರು. ನೇತ್ರಾವತಿ ಸಂಜೀವಿನಿ ತಾಲೂಕುಮಟ್ಟದ ಒಕ್ಕೂಟ ಅಧ್ಯಕ್ಷೆ ಮಧುರ ಅಧ್ಯಕ್ಷತೆ ವಹಿಸಿದ್ದರು. ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಪದ್ಮನಾಭ ಸಾಲ್ಯಾನ್, ಗುರುವಾಯನಕೆರೆ ನಾಗರೀಕ ಸೇವಾ ಟ್ರಸ್ಟ್‌ನ ವಿದ್ಯಾ ಆರ್.ನಾಯಕ್, ತಾಲೂಕು ಎನ್.ಆರ್.ಎಲ್.ಎಂ. ಕಾರ್ಯಕ್ರಮ ವ್ಯವಸ್ಥಾಪಕಿ ಪ್ರತಿಮಾ, ಜಿಲ್ಲಾ ವ್ಯವಸ್ಥಾಪಕಿ ಶಕುಂತಲಾ, ತಾಪಂ ವ್ಯವಸ್ಥಾಪಕ ಪ್ರಶಾಂತ್ ಜೈನ್, ನರೇಗಾ ಯೋಜನೆ ಸಹಾಯಕ ನಿರ್ದೇಶಕಿ ಸಫಾನಾ, ತಾಲೂಕಿನ 48 ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಸದಸ್ಯರು ಉಪಸ್ಥಿತರಿದ್ದರು. ತಾಲೂಕು ವ್ಯವಸ್ಥಾಪಕ ನಿತೀಶ್, ಸಂಜೀವಿನಿ ವಲಯ ಮೇಲ್ವಿಚಾರಕರಾದ ಸ್ವಸ್ತಿಕ್ ಜೈನ್, ವೀಣಾಶ್ರೀ ಕೆ.ಕೆ., ಟಿ.ಐ.ಎಂ.ಎಸ್.ವಿನೋದ್ ಪ್ರಸಾದ್ ಕಲ್ಲಾಜೆ, ಬಿ.ಆರ್.ಪಿ.ಆರ್.ಐ ಶ್ರೀಕಲಾ, ಸಂಜೀವಿನಿ ಸದಸ್ಯರು ಸಹಕರಿಸಿದರು. ವಲಯ ಮೇಲ್ವಿಚಾರಕ ಜಯಾನಂದ್ ಸ್ವಾಗತಿಸಿದರು. ವಸಂತಿ, ಮಾಲಾತಿ ನೀತಾ ನಿರೂಪಿಸಿದರು. ಕಾರ್ಯದರ್ಶಿ ಶೀಲಾ ವಂದಿಸಿದರು.

ವಿಶೇಷ ಕಾರ್ಯಕ್ರಮ

ವಿವಿಧ ಬಗೆಯ 147 ಖಾದ್ಯಗಳು, ಮೆರುಗು ತಂದ ಆಂಟಿ ಕಳೆಂಜ ಪ್ರವೇಶ, ತುಳುನಾಡಿನ ಪ್ರಾಚೀನ ವಸ್ತುಗಳ ಪ್ರದರ್ಶನ, ಆಟೋಟ ಸ್ಪರ್ಧೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಮಹಿಳೆಯರ ಕೋರಿದ ಕಟ್ಟ ಡ್ಯಾನ್ಸ್ ರಂಗೇರಿಸಿತು. ಸಂಜೀವಿನಿ ಮಾಸಿಕ ಸಂತೆ ನಡೆಯಿತು.