ಉಳ್ಳಾಲ: ನಮ್ಮ ಹಿರಿಯರು ಆಟಿ ತಿಂಗಳಲ್ಲಿ ಪ್ರಕೃತಿಯಲ್ಲಿ ಸಿಗುವ ಸಹಜವಾದ ತಿನಿಸು, ಸೊಪ್ಪುಗಳನ್ನು ತಿಂದು ಬದುಕುತ್ತಿದ್ದರು. ಬಡತನ ಇದಕ್ಕೆ ಕಾರಣವಾದರೂ, ಆಟಿಯಲ್ಲಿ ಸಿಗುವ ಹಲವು ಪದಾರ್ಥಗಳು ದೇಹ ಮತ್ತು ಆರೋಗ್ಯಕ್ಕೆ ಒಳ್ಳೆಯದು ಎನ್ನುವ ನಂಬಿಕೆಯೂ ಇತ್ತು ಎಂದು ಯಾದವ ಸಭಾ ಕೇಂದ್ರ ಸಮಿತಿ ಅಧ್ಯಕ್ಷ ಎ.ಕೆ.ಮಣಿಯಾಣಿ ಬೆಳ್ಳಾರೆ ಹೇಳಿದರು.
ಕೊಲ್ಯದಲ್ಲಿ ಮಂಗಳೂರು ಯಾದವ ಸಭಾ ಕರ್ನಾಟಕ ಕೇಂದ್ರ ಸಮಿತಿ ಆಶ್ರಯದಲ್ಲಿ, ಉಳ್ಳಾಲ ತಾಲೂಕು ಪ್ರಾದೇಶಿಕ ಮಹಿಳಾ ಸಮಿತಿ ಮತ್ತು ಯುವ ವೇದಿಕೆ ವತಿಯಿಂದ ‘ಆಟಿಡೊಂಜಿ ದಿನ ಕೂಟ’ದಲ್ಲಿ ಭಾನುವಾರ ಮಾತನಾಡಿದರು.
ಉಳ್ಳಾಲ ತಾಲೂಕು ಯಾದವ ಸಭಾ ಅಧ್ಯಕ್ಷ ಕೆ.ಸಂಜೀವ ಮಣಿಯಾಣಿ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ವಿಶ್ವವಿದ್ಯಾಲಯ ವಿಶ್ರಾಂತ ಪ್ರಾಂಶುಪಾಲ ಡಾ.ಶ್ರೀಧರ ಮಣಿಯಾಣಿ ಸಂಪನ್ಮೂಲ ವ್ಯಕ್ತಿಯಾಗಿದ್ದರು.
ಉರ್ವಸ್ಟೋರ್ ಶ್ರೀ ಮಹಾಗಣಪತಿ ದೇವಸ್ಥಾನ ಪ್ರಧಾನ ಕಾರ್ಯದರ್ಶಿ ಶ್ರೀಧರ ಮಣಿಯಾಣಿ, ಯಾದವ ಸಭಾ ಕೇಂದ್ರ ಸಲಹಾ ಮಂಡಳಿ ಅಧ್ಯಕ್ಷ ಸುಧಾಮ ಆಲೆಟ್ಟಿ, ಪ್ರಧಾನ ಕಾರ್ಯದರ್ಶಿ ಸದಾನಂದ ಕಾವೂರು, ಕೋಶಾಧಿಕಾರಿ ಚಂದ್ರಶೇಖರ ಅಳಿಕೆ, ಯಾದವ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಪಿ.ನಾರಾಯಣ, ಕೊಲ್ಯ ನಿವೃತ್ತ ಎಎಸ್‌ಐ ಶಿವರಾಮ ಮಣಿಯಾಣಿ, ಮಂಗಳೂರಿನ ಖ್ಯಾತ ವಕೀಲ ಎಂ.ಶಿವರಾಮ ಮಣಿಯಾಣಿ, ಬಿಜೆಪಿ ಕಣ್ಣೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಧಾಮ ಗೋಸಾಡ, ಕೇಂದ್ರ ಸಮಿತಿ ಉಪಾಧ್ಯಕ್ಷ ಗೋಪಾಲ ಅರಿಕೆ ಪದವು, ನಿವೃತ್ತ ಸಾರಿಗೆ ಅಧಿಕಾರಿ ಪುರುಷೋತ್ತಮ, ಉಳ್ಳಾಲ ತಾಲೂಕು ಯಾದವ ಸಭಾ ಕಾರ್ಯದರ್ಶಿ ದಾಮೋದರ ಎಂ. ಮೊದಲಾದವರು ಉಪಸ್ಥಿತರಿದ್ದರು.
ಉಳ್ಳಾಲ ತಾಲೂಕು ಯಾದವ ಸಭಾ ಮಹಿಳಾ ವೇದಿಕೆ ಅಧ್ಯಕ್ಷೆ ಮೀನಾ ಬಾಲಕೃಷ್ಣ ಸ್ವಾಗತಿಸಿದರು. ಸದಸ್ಯ ಉದಯಕುಮಾರ್ ವರದಿ ವಾಚಿಸಿದರು.