ದೈವನರ್ತಕ ಮನು ಪಣಿಕ್ಕರ್ ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್‌ಗೆ ನೆರವಿನ ಮೊತ್ತ ಹಸ್ತಾಂತರಿಸಿದರು. ಅಖಿಲೇಶ್ ನಗುಮುಗಂ, ಕುಂಬ್ಡಾಜೆ ಗ್ರಾಪಂ ಸದಸ್ಯ ಹರೀಶ್ ಗೋಸಾಡ, ಲೇಖಕಿ ಸುಶ್ಮಿತಾ ಹಾಗೂ ಪಣಿಕ್ಕರ್ ಕುಟುಂಬಸ್ಥರು ಉಪಸ್ಥಿತರಿದ್ದರು. 
ಜಿಲ್ಲೆ

ಆಟಿ ಕಳಂಜದಲ್ಲಿ ಸಂಗ್ರಹಿಸಿದ ಹಣ ವಯನಾಡಿಗೆ ದೇಣಿಗೆ

ಕಾಸರಗೋಡು: ಕುಂಬ್ಡಾಜೆ ಪಂಚಾಯಿತಿ ಉಬ್ರಂಗಳ ಬೆದ್ರಡಿ ನಿವಾಸಿ, ದೈವನರ್ತಕ ಮನು ಪಣಿಕ್ಕರ್ ಮತ್ತು ಅವರ ಕುಟುಂಬದವರು ಆಟಿ ಕಳಂಜ ಮೂಲಕ ಸಂಗ್ರಹವಾದ ಮೊತ್ತವನ್ನು ವಯನಾಡು ಪರಿಹಾರಕ್ಕೆ ಪಾವತಿಸಿದ್ದಾರೆ. ಮುಖ್ಯಮಂತ್ರಿಗಳ

ಕರ್ಕಾಟಕ ಮಾಸದಲ್ಲಿ ಮನೆ ಮನೆಗೆ ಹೋಗಿ ಸಂಗ್ರಹಿಸಿದ ಹತ್ತು ಸಾವಿರ ರೂಪಾಯಿಯನ್ನು ಪರಿಹಾರ ನಿಧಿಗೆ ದೇಣಿಗೆಯಾಗಿ ನೀಡಿದ್ದಾರೆ. ಶಾಸಕ ಎಂ.ರಾಜಗೋಪಾಲನ್, ವಕೀಲ ಸಿ.ಎಚ್ ಕುಞಂಬು, ಜಿಪಂ ಅಧ್ಯಕ್ಷೆ ಪಿ. ಬೇಬಿ ಬಾಲಕೃಷ್ಣನ್ ಉಪಸ್ಥಿತಿಯಲ್ಲಿ ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಅವರಿಗೆ ಮೊತ್ತ ಹಸ್ತಾಂತರಿಸಲಾಯಿತು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜನಜಾಗೃತಿ ವೇದಿಕೆ ಕಾಸರಗೋಡು ತಾಲೂಕು ಘಟಕ ಅಧ್ಯಕ್ಷ ಅಖಿಲೇಶ್ ನಗುಮುಗಂ, ಕುಂಬ್ಡಾಜೆ ಗ್ರಾಪಂ ಸದಸ್ಯ ಹರೀಶ್ ಗೋಸಾಡ, ಲೇಖಕಿ ಸುಶ್ಮಿತಾ ಹಾಗೂ ಪಣಿಕ್ಕರ್ ಕುಟುಂಬಸ್ಥರು ಜತೆಗಿದ್ದರು.