ಜಿಲ್ಲೆ

ಕರಿಯಂಗಳ ಗ್ರಾಪಂ ಆಟಿದ ಗಮ್ಮತ್

ಸೌಮ್ಯ ಆರ್

ಗುರುಪುರ: ಕರಿಯಂಗಳ ಗ್ರಾಪಂ ಮತ್ತು ಮಾನಸ ಸಂಜೀವಿನಿ ಒಕ್ಕೂಟ ಆಶ್ರಯದಲ್ಲಿ ಕರಿಯಂಗಳ ಪಂಚಾಯಿತಿ ಎನ್‌ಆರ್‌ಎಲ್‌ಎಂ ಸಭಾಂಗಣದಲ್ಲಿ ಬುಧವಾರ ‘ಆಟಿದ ಗಮ್ಮತ್’ ಕಾರ್ಯಕ್ರಮ ಜರುಗಿತು.

ಪಂಚಾಯಿತಿ ಅಧ್ಯಕ್ಷೆ ರಾಧಾ ಅಧ್ಯಕ್ಷತೆ ವಹಿಸಿದ್ದರು. ಆಟಿದ ಗಮ್ಮತ್‌ನಲ್ಲಿ ವಿವಿಧ ಮನೋರಂಜನಾ ಕಾರ್ಯಕ್ರಮ ಹಾಗೂ ಆಟೋಟ ಸ್ಪರ್ಧೆ ಏರ್ಪಡಿಸಲಾಗಿತ್ತು.

ಬಂಟ್ವಾಳ ತಾಪಂ ಕಾರ್ಯನಿರ್ವಹಣಾಧಿಕಾರಿ ಸಚಿನ್ ಕುಮಾರ್, ನರೇಗಾ ವಿಭಾಗದ ಇಂಜಿನಿಯರ್ ಸುಶಾನ್ ಬಿ.ಕೆ., ಗ್ರಾಮ ಆಡಳಿತಾಧಿಕಾರಿ ಸುವಾಸಿನಿ, ನಿವೃತ್ತ ಪಿಡಿಒ ಮಾಲಿನಿ ಬಿ.ವಿ., ಗುತ್ತಿಗೆದಾರ ಅಬೂಬಕ್ಕರ್, ಮಾನಸ ಸಂಜೀವಿನಿ ಒಕ್ಕೂಟ ಅಧ್ಯಕ್ಷೆ ಪೂರ್ಣಿಮಾ, ಪಿಡಿಒ ವಸಂತಿ, ದ್ವಿತೀಯ ದರ್ಜೆ ಲೆಕ್ಕ ಸಹಾಯಕಿ ಭಾರತಿ, ಗ್ರಾಪಂ ಸದಸ್ಯರು, ಪಂಚಾಯಿತಿ ಸಿಬ್ಬಂದಿ ವರ್ಗ, ಮಾನಸ ಸಂಜೀವಿನಿ ಒಕ್ಕೂಟ ಸದಸ್ಯರು, ಗ್ರಾಮಸ್ಥರು ಪಾಲ್ಗೊಂಡಿದ್ದರು.