ಜಿಲ್ಲೆ

ತುಳುನಾಡಿನ ಹಬ್ಬಗಳಿಗೆ ಕೃಷಿಯೇ ಮೂಲ : ಡಾ.ದಿವಾಕರ ಕೊಕ್ಕಡ ಹೇಳಿಕೆ ಉಜಿರೆಯಲ್ಲಿ ಆಟಿಡೊಂಜಿ ದಿನ

ಸೌಮ್ಯ ಆರ್

ಬೆಳ್ತಂಗಡಿ: ತುಳುನಾಡಿನಲ್ಲಿ ಬಾಳಿ ಬದುಕಿದ ಹಿರಿಯರು ಪ್ರಕೃತಿಯಲ್ಲಿ ದೊರೆಯುವ ಮರಗಿಡ, ಬಳ್ಳಿ, ಗೆಡ್ಡೆ ಮುಂತಾದವುಗಳನ್ನು ಆಹಾರ, ಔಷಧಿಯಾಗಿ ಬಳಸಿಕೊಂಡು ಆಟಿ ತಿಂಗಳ ಕಷ್ಟದ ದಿನಗಳಲ್ಲಿ ರೋಗರುಜಿನ ಬಾಧಿಸದಂತೆ ಬದುಕಿದ್ದರು. ಇಲ್ಲಿನ ಎಲ್ಲಾ ಹಬ್ಬಗಳಿಗೆ ಕೃಷಿ ಮೂಲವಾಗಿದ್ದು, ಅದಕ್ಕೆ ಸಂಬಂಧಿಸಿದಂತೆ ಆಚರಣೆ ಬೆಳೆದು ಬಂದಿದೆ ಎಂದು ಶ್ರೀ ಧ. ಮಂ. ಕಾಲೇಜಿನ ಕನ್ನಡ ಸಹ ಪ್ರಾಧ್ಯಾಪಕ ಡಾ.ದಿವಾಕರ ಕೊಕ್ಕಡ ಹೇಳಿದರು.

ಶ್ರೀ ಧ. ಮಂ. ಬಿ.ಎಡ್., ಡಿ.ಎಡ್. ಕಾಲೇಜಿನಲ್ಲಿ ನಡೆದ ಆಟಿಡೊಂಜಿ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಉಜಿರೆ ಎಸ್‌ಡಿಎಂ ಕಾಲೇಜು ರಂಗ ನಿರ್ದೇಶಕ ಯಶವಂತ್, ಬಿ.ಎಡ್. ಕಾಲೇಜು ಸಹಾಯಕ ಪ್ರಾಧ್ಯಾಪಕ ತಿರುಮಲೇಶ್ ರಾವ್ ಎನ್.ಕೆ. ಮಾತನಾಡಿದರು.

ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿ ಪ್ರಶ್ವಿತ್ ಆಟಿ ತಿಂಗಳ ವಿಶೇಷತೆ ಸ್ಪರ್ಧೆ ಏರ್ಪಡಿಸಿದ್ದರು.

ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಪ್ರಶಿಕ್ಷಣಾರ್ಥಿ ದಿವ್ಯಾ ಸ್ವಾಗತಿಸಿದರು. ಪ್ರಜ್ಞಾ ವಂದಿಸಿದರು. ರಶ್ಮಿ ಕೆ.ಪಿ. ಅತಿಥಿಗಳನ್ನು ಪರಿಚಯಿಸಿದರು. ಚೈತನ್ಯ, ಪ್ರಭಾವತಿ ನಿರೂಪಿಸಿದರು.

ತುಳುನಾಡಿನ ಜನರು ಪ್ರಕೃತಿಯನ್ನು ಆರಾಧಿಸಿಕೊಂಡು ಬಂದಿದ್ದು, ಇಲ್ಲಿನ ಸಂಸ್ಕೃತಿಯು ಶ್ರೇಷ್ಠತೆ ಹೊಂದಿದೆ. ಸಂಸ್ಕೃತಿಯ ಕುರಿತು ಇಂದಿನ ಯುವ ಜನತೆ ಪಾಲಿಸಬೇಕು. ತಿರುಮಲೇಶ್ ರಾವ್ ಎನ್.ಕೆ. ಬಿ.ಎಡ್. ಕಾಲೇಜು ಸಹಾಯಕ ಪ್ರಾಧ್ಯಾಪಕ