ಜಿಲ್ಲೆ

ಕೌಟುಂಬಿಕ ವಲಯದ ಸಂಭ್ರಮದಿಂದ ಬಾಂಧವ್ಯ ವೃದ್ಧಿ : ಪ್ರಕಾಶ್ ಅಂಚನ್ ಅಭಿಪ್ರಾಯ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಬಂಟ್ವಾಳ

ಕೌಟುಂಬಿಕ ವಲಯದಲ್ಲಿ ಆಟಿಕೂಟ ಕಾರ್ಯಕ್ರಮಗಳ ಆಯೋಜನೆ ಮೂಲಕ ಹಿರಿಯರು, ಕಿರಿಯರ ನಡುವಿನ ಸಂಬಂಧ ಬಾಂಧವ್ಯ ವೃದ್ಧಿಯಾಗಲಿದೆ. ಈ ಪರಿಕಲ್ಪನೆಯನ್ನು ಉಳಿಸಿ ಬೆಳೆಸುವ ಕಾರ್ಯ ಆಗಬೇಕು ಎಂದು ಮುಗಮನೆ ಅಂಚನ್ ಕುಟುಂಬಸ್ಥರ ಸೇವಾ ಟ್ರಸ್ಟ್ ಅಧ್ಯಕ್ಷ ಪ್ರಕಾಶ್ ಅಂಚನ್ ಹೇಳಿದರು.

ಸಜೀಪಪಡು ಗ್ರಾಮದ ಕೋಟೆಕಣಿಯ ಮುಗ ಮನೆ ಅಂಚನ್ ಕುಟುಂಬಸ್ಥರ ತರವಾಡು ಮನೆಯಲ್ಲಿ ಭಾನುವಾರ ಆಟಿಡೊಂಜಿ ಅಂಚನ್ ಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.

ಬಳಿಕ ವಿವಿಧ ಮನೋರಂಜನಾ ಆಟೋಟಗಳು ನಡೆದವು. ಮಧ್ಯಾಹ್ನ 27 ಬಗೆಯ ಆಟಿ ತಿಂಗಳ ಖಾದ್ಯದೊಂದಿಗೆ ಸಹಭೋಜನ ನಡೆಯಿತು.

ಸಮಾರೋಪ ಸಮಾರಂಭದಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಆಟೋಟಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಟ್ರಸ್ಟ್ ಅಧ್ಯಕ್ಷ ಪ್ರಕಾಶ್ ಅಂಚನ್, ಕಾರ್ಯದರ್ಶಿ ಪ್ರವೀಣ್ ಅಂಚನ್, ಟ್ರಸ್ಟಿಗಳಾದ ಹರೀಶ್ ಅಂಚನ್, ದಿನೇಶ್ ಅಂಚನ್, ಪುರುಷೋತ್ತಮ ಅಂಚನ್ ದೇರಳಕಟ್ಟೆ, ಉಮೇಶ್ ಅಂಚನ್, ನವೀನ್ ಅಂಚನ್, ಜಯಂತ್ ಅಂಚನ್, ಶೇಖರ್ ಅಂಚನ್, ಶೀನ ಪೂಜಾರಿ, ಸುಕುಮಾರ್ ಅಂಚನ್ ಮೊದಲಾದವರಿದ್ದರು. ಪುರುಷೋತ್ತಮ ಅಂಚನ್ ಪಂಜಿಕಲ್ಲು ಆಟೋಟಗಳನ್ನು ನಡೆಸಿಕೊಟ್ಟರು.